ಸಕಲೇಶಪುರ: ತಾಲ್ಲೂಕಿನ ಹಾಲೇ ಬೇಲೂರಿನ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ಹಳೇ ಕಾಲದ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.

ಈ ತೋಟದಲ್ಲಿ ಕೆಲಸ ಮಾಡುತ್ತಿದ್ದ, ವಾಟೇಗದ್ದೆ ಗ್ರಾಮದ ಹರೀಶ್ ಅವರಿಗೆ ಡಿ.27ರಂದು ಬೆಳ್ಳಿ ನಾಣ್ಯಗಳು ದೊರೆತಿವೆ. ಈ ಬಗ್ಗೆ ತೋಟದ ಮಾಲೀಕರಿಗಾಗಲಿ, ಪೊಲೀಸರಿಗಾಗಲಿ ತಿಳಿಸದೆ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಶ್ಯಾಮ್ ಅವರು, ಹರೀಶ್ ಬಳಿ ವಿಚಾರಿಸಿದ್ದು, ಯಾವುದೇ ನಾಣ್ಯ ಸಿಕ್ಕಿಲ್ಲ ಎಂದಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ಬಳಿಕ 9 ನಾಣ್ಯಗಳನ್ನು ನೀಡಿದ್ದಾರೆ.

ಈ ನಾಣ್ಯಗಳನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ಶ್ಯಾಮ್, ಇನ್ನಷ್ಟು ನಾಣ್ಯಗಳು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರು ಹರೀಶ್ ಅವರ ಮನೆ ಶೋಧಿಸಿದಾಗ ಪುನಃ 19 ನಾಣ್ಯಗಳು ದೊರೆತಿವೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಅನಿಲ್ ಕುಮಾರ್, ಇನ್‌ಸ್ಪೆಕ್ಟರ್ ಚೈತನ್ಯ, ಪಿಎಸ್‌ಐ ಬಸವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.