ಹಳೇಬೀಡು ಭಾಗಕ್ಕೆ ಯಗಚಿ ನದಿಯಿಂದ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಂಕ್ರೀಟ್ ಕಾಮಗಾರಿ.
ಹಳೇಬೀಡು ಭಾಗಕ್ಕೆ ನೀರು ಹರಿಸುವ ಸುರಂಗ ಮಾರ್ಗದಲ್ಲಿ ಬಂಡೆ ಕೊರೆಯುತ್ತಿರುವ ಕಾರ್ಮಿಕರು.
ದ್ವಾರಸಮುದ್ರಕ್ಕೆ ನದಿಯ ಕೊರತೆ ನೀಗಿಸಲು ಹೊಯ್ಸಳರು ಯಗಚಿ ನದಿಯಿಂದ ನಾಲೆ ನಿರ್ಮಿಸಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ. ನಾಲೆ ಕಾಮಗಾರಿ ಪೂರ್ಣಗೊಂಡ ನಂತರ ವೈಭವ ಮರುಕಳಿಸಲಿದೆ.
ಟಿ.ಬಿ.ಹಾಲಪ್ಪ ರೈತ ಸಂಘದ ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷ
ನಿರ್ಮಾಣ ಹಂತದ ಸುರಂಗ ಸೋರಿಕೆ ತಪ್ಪಿಸಲು ಕಾಂಕ್ರೀಟ್ ಲೈನಿಂಗ್‌ಗೆ ಹಣ ಮಂಜೂರು ಮಾಡಿಸಲು ಶೀಘ್ರವೇ ಶಾಸಕರು ಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ.
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ.
ನುರಿತ ತಂತ್ರಜ್ಞರು ಹಾಗೂ ಕಾರ್ಮಿಕರು ನಾಲೆ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಮಿಕರ ಸುರಕ್ಷತೆ ಜೊತೆಗೆ ಸುರಂಗ ನಾಲೆ ಶಾಶ್ವತವಾಗಿರುವಂತೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ನವೀನ್ ನೀರಾವರಿ ಇಲಾಖೆ ಎಂಜಿನಿಯರ್
120 ಅಡಿ ಆಳದಲ್ಲಿ 5.16 ಕಿ.ಮೀ. ಸುರಂಗ
‘ಯಂತ್ರ ಬಳಕೆ ಮಾತ್ರವಲ್ಲದೇ ಕಾರ್ಮಿಕರ ಶ್ರಮದಿಂದಲೂ ಗಟ್ಟಿಯಾದ ಹೆಬ್ಬಂಡೆಗಳನ್ನು ಕೊರೆದು ಸುರಂಗ ನಾಲೆ ನಿರ್ಮಿಸಲಾಗುತ್ತಿದೆ. ಸಡಿಲವಾದ ಮಣ್ಣು ಸಿಕ್ಕಿದ ಜಾಗದಲ್ಲಿಯೂ ಕೆಲಸ ಸುಲಭವಾಗಿಲ್ಲ. ಮಣ್ಣು ಕುಸಿಯದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ’ ಎನ್ನುತ್ತಾರೆ ಎಂಜಿನಿಯರ್‌ಗಳು. ‘120 ಅಡಿ ಆಳದಲ್ಲಿ 5.16 ಕಿ.ಮೀ. ಸುರಂಗ ನಾಲೆ ನಿರ್ಮಾಣ ಮಾಡಲಾಗುತ್ತಿದೆ. 3.5 ಕಿ.ಮೀ. ಸುರಂಗ ನಾಲೆ ಕೆಲಸ ಮುಗಿದಿದ್ದು 1.52 ಕಿ.ಮೀ. ಕೆಲಸ ಆಗಬೇಕಾಗಿದೆ. 100 ಕ್ಯುಸೆಕ್ ನೀರು ಹರಿಸುವ ಸಾಮರ್ಥ್ಯದ ಸುರಂಗ ನಿರ್ಮಾಣವಾಗುತ್ತಿದೆ. ತೆರೆದ ನಾಲೆ ಹಾಗೂ ಸುರಂಗದಲ್ಲಿ ನೀರು ಹರಿಸಿದರೆ 120 ದಿನದಲ್ಲಿ ದ್ವಾರಸಮುದ್ರ ಹಾಗೂ ಬೆಳವಾಡಿ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸಬಹುದು’ ಎನ್ನುತ್ತಾರೆ ಎಂಜಿನಿಯರ್‌ಗಳು.