ಹಾಸನ: ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಹಾಸನಾಂಬ ದೇವಿ ದರ್ಶನ ಪಡೆದರು. ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಮೂರು ಗಂಟೆ ಪ್ರವಾಸಿ ಮಂದಿರದಲ್ಲಿ ಕಾದು ಕುಳಿತುಕೊಳ್ಳಬೇಕಾಯಿತು. ಮಧ್ಯಾಹ್ನ 2.30 ರಿಂದ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿತ್ತು. ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆಯೇ ಪ್ರವಾಸಿ ಮಂದಿರದಿಂದ ದೇವಿ ದರ್ಶನಕ್ಕೆ ಪತ್ನಿಯೊಂದಿಗೆ ಬಂದು ವಶಿಷ್ಠ ಸಿಂಹ ಹಾಸನಾಂಬೆಯ ದರ್ಶನ ಪಡೆದರು.

‘ಮೊದಲ ಬಾರಿ ಬಂದಿರುವುದು ಖುಷಿಯಾಗಿದೆ. ಮದುವೆಯಾದ ಮೇಲೆ ಇವರ ಜೊತೆ ಬಂದಿದ್ದೇನೆ. ಎರಡು ವರ್ಷದ ಹಿಂದೆ ಇವರು ಬಂದ್ದಿದ್ದಾಗ, ದೇವಿ ದರ್ಶನ ಹೇಗಾಯಿತು ಎಂದು ಕೇಳಿದ್ದೆ. ಈಗ ಒಟ್ಟಿಗೆ ಬಂದಿದ್ದೇವೆ, ತುಂಬಾ ಖುಷಿಯಾಯಿತು. ಮತ್ತೆ ಮತ್ತೆ ದರ್ಶನ ಭಾಗ್ಯ ಕೊಡಮ್ಮ ಎಂದು ದೇವಿಯ ಬಳಿ ಪ್ರಾರ್ಥಿಸಿದ್ದೇನೆ. ಪ್ರತಿವರ್ಷ ಬರೋಣ ಎಂದುಕೊಂಡಿದ್ದೇವೆ. ತಾಯಿ ಕರೆಸಿಕೊಳ್ಳಬೇಕಷ್ಟೆ’ ಎಂದು ಹರಿಪ್ರಿಯಾ ಹೇಳಿದರು.

‘ಹಾಸನಾಂಬೆ ದರ್ಶನಕ್ಕೆ ಪ್ರತಿ ವರ್ಷ ಬರುವುದು ನನಗೆ ಪ್ರತೀತಿ. ಇಷ್ಟು ವರ್ಷ ಒಬ್ಬನೇ ಬರುತ್ತಿದೆ. ಈ ವರ್ಷ ಹೆಂಡತಿ ಜೊತೆ ಬಂದಿದ್ದೇನೆ. ಪ್ರೀತಿಸುವ ದಿನಗಳಲ್ಲಿ ಬೇಡಿಕೆ, ಹರಕೆ ಇರುತ್ತೆ. ಎಲ್ಲ ಸುಗಮವಾಗಿ ಆಗಲಿ. ಬೇಗ ಮದುವೆಯಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೆ. ಆ ಬೇಡಿಕೆ ಈಡೇರಿದೆ. ಈಗ ಜೊತೆಯಲ್ಲಿ ಬಂದಿದ್ದೇವೆ. ಆ ತಾಯಿಯ ದರ್ಶನ ಪಡೆದಿದ್ದೆ ಒಂದು ಪುಣ್ಯ. ದರ್ಶನ ಸಿಗಲಿ ಎನ್ನುವುದೇ ನನ್ನ ಪ್ರಾರ್ಥನೆ. ಈ ಬಾರಿ ಒಟ್ಟಿಗೆ ದರ್ಶನ ಮಾಡಿದ್ದೇವೆ’ ವಸಿಷ್ಠ ಸಿಂಹ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.