ಬೇಲೂರು: ಇಲ್ಲಿನ ನೆಹರು ನಗರದಲ್ಲಿ ಕೂಡ್ಲೂರು ನಾಲೆ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿ ಬೆಳೆಗೆ ಹಾನಿಯಾಗಿದೆ.

ಚಿಕ್ಕಮಗಳೂರು ರಸ್ತೆಯ, ಚಿಕ್ಕಬ್ಯಾಡಿಗೆರೆ ಕೆರೆ ಸಮೀಪದಿಂದ ನೆಹರು ನಗರದ ಅಯ್ಯಪ್ಪ ದೇಗುಲದವರೆಗೆ ಸಂಪರ್ಕ ನೀಡುವ ನಾಲೆ ಏರಿ ಅತಿ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಇದರಿಂದ ನಾಲೆ ಏರಿಯ ಪಕ್ಕದ ಜಮೀನುಗಳ ಬೆಳೆ ಹಾಳಾಗಿದ್ದು, ವಿದ್ಯುತ್ ಕಂಬಗಳ ಬಿಳುವ ಸ್ಥಿತಿಯನ್ನು ತಲುಪಿವೆ.

‘ನಾಲೆಯಲ್ಲಿ ವಿಪರೀತ ಕಳೆ ಬೆಳೆದಿದ್ದು, ನೀರು ಸರಾಗವಾಗಿ ಹರಿಯದ ಕಾರಣ ಏರಿ ಒಡೆದಿದೆ. ಯಗಚಿ ಜಲಾಶಯ ಯೋಜನೆಯ ಎಂಜಿನಿಯರ್ಗಳು ಕೆರೆ ಏರಿ ದುರಸ್ಥಿಪಡಿಸಬೇಕು ಹಾಗೂ ಸೆಸ್ಕ್ ಅಧಿಕಾರಿಗಳು ಬೀಳುವ ಸ್ಥಿತಿಯ ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಹೆಚ್ಚಿನ ಅವಘಡಗಳು ಸಂಭವಿಸಿದರೆ ಸೆಸ್ಕ್ ಹಾಗೂ ಯಗಚಿ ಜಲಾಶಯ ಯೋಜನೆಯ ಎಂಜಿನಿಯರ್ಗಳು ಹೊಣೆಗಾರರಾಗುತ್ತಾರೆ’ ಎಂದು ರೈತ ರಾಯಪುರ ಶಿವಣ್ಣ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.