ಹಾವೇರಿ: ಬಾಲ್ಯದ ಬುನಾದಿ ಕೇಂದ್ರಗಳು ಎನಿಸಿಕೊಂಡಿರುವ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, 304 ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡದಿಂದ ಇದುವರೆಗೂ ಮುಕ್ತಿ ಸಿಕ್ಕಿಲ್ಲ.

ಜಿಲ್ಲೆಯ ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಶೈಕ್ಷಣಿಕ ಬುನಾದಿಗೆ ಅಗತ್ಯವಿರುವ ಕಲಿಕೆಯಲ್ಲಿ ತೊಡಗಿಸಲಾಗುತ್ತಿದೆ. ಹೆಚ್ಚಿನ ಪೋಷಕರು, ಮೂಲ ಸೌಕರ್ಯಗಳ ನಡುವೆಯೇ ತಮ್ಮ ಮಕ್ಕಳನ್ನು ಅಂಗನವಾಡಿಗೆ ಸೇರಿಸುತ್ತಿದ್ದಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆಯಲ್ಲೂ ಅಂಗನವಾಡಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಹೆಚ್ಚಿದೆ. ಇದರ ನಡುವೆಯೇ, ಮಕ್ಕಳಿಗೆ ತಕ್ಕಂತೆ ಸೌಲಭ್ಯಗಳ ಕೊರತೆ ಇರುವುದಾಗಿ ಪೋಷಕರು ದೂರುತ್ತಿದ್ದಾರೆ.

‘ಜಿಲ್ಲೆಯಲ್ಲಿ ಸದ್ಯ 1,991 (ಗ್ರಾಮೀಣ–1,668 ಹಾಗೂ ನಗರ–323) ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 1,478 (ಗ್ರಾಮೀಣ–1,343 ಹಾಗೂ ನಗರ– 135) ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿವೆ. ಉಳಿದಂತೆ, 304 (ಗ್ರಾಮೀಣ– 144 ಹಾಗೂ ನಗರ 160) ಅಂಗನವಾಡಿಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 82 ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಿಸುವ ಕೆಲಸ ಶುರುವಾಗಿದೆ. 4 ಕಟ್ಟಡಗಳ ನಿರ್ಮಾಣ ಮುಕ್ತಾಯಗೊಂಡಿದ್ದು, ಹಸ್ತಾಂತರ ಪ್ರಕ್ರಿಯೆ ಬಾಕಿ ಇದೆ. ಉಳಿದಂತೆ, 427 ಅಂಗನವಾಡಿಗಳಿಗೆ ಹೊಸದಾಗಿ ಕಟ್ಟಡ ನಿರ್ಮಿಸಬೇಕಾದ ಪ್ರಸ್ತಾವವಿದೆ’ ಎಂದು ಹೇಳಿದರು.

‘ಪ್ರಾಥಮಿಕ ಶಾಲೆಗಳು ನಡೆಯುತ್ತಿರುವ ಜಾಗದಲ್ಲಿಯೇ ಕಟ್ಟಡವನ್ನು ಪಡೆದುಕೊಂಡು 75 ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಸಮುದಾಯ, ಯುವಕ ಮಂಡಳ, ಪಂಚಾಯಿತಿ ಹಾಗೂ ಮಹಿಳಾ ಮಂಡಳಗಳಿಗೆ ಸೇರಿದ್ದ ಜಾಗದಲ್ಲಿರುವ ಕಟ್ಟಡದಲ್ಲಿ 134 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.

‘ಪಿಆರ್ಇಡಿ, ಗ್ರಾಮ ಪಂಚಾಯಿತಿ, ಕೆಆರ್ಐಡಿಎಲ್ ಸೇರಿದಂತೆ ವಿವಿಧ ಯೋಜನೆಗಳಡಿ 86 ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಬೇಕಿದೆ. ಈ ಪೈಕಿ 20 ಕಟ್ಟಡಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. 66 ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ’ ಎಂದರು.

84 ಅಂಗನವಾಡಿಗಳಿಗೆ ಅಡುಗೆ ಮನೆಯಿಲ್ಲ: ‘ಕಟ್ಟಡದೊಳಗೆ ಅಡುಗೆ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಬಹುತೇಕ ಕಟ್ಟಡಗಳಿಗೆ ಅಡುಗೆ ಮನೆಗಳಿವೆ. ಆದರೆ, ಜಿಲ್ಲೆಯ 84 ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಮನೆಯೇ ಇಲ್ಲ. ಕಟ್ಟಡದ ಹೊರಗೆ ಅಥವಾ ಬೇರೆ ಜಾಗದಲ್ಲಿ ಅಡುಗೆ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

ಪ್ರತಿಯೊಂದು ಅಂಗನವಾಡಿಯಲ್ಲಿ ಕೈ ತೋಟ, ಶೌಚಾಲಯ, ನೀರು, ವಿದ್ಯುತ್, ಕಾಂಪೌಂಡ್, ಆಟದ ಮೈದಾನ, ಫ್ಯಾನ್ ಸೇರಿದಂತೆ ಮೂಲ ಸೌಕರ್ಯಗಳು ಇರಬೇಕು. ಆದರೆ, ಇವುಗಳ ಕೊರತೆ ಕಂಡುಬರುತ್ತಿದೆ.

‘1,991 ಅಂಗನವಾಡಿಗಳ ಪೈಕಿ 82 ಅಂಗನವಾಡಿಗಳಲ್ಲಿ ಕೈ ತೋಟವಿಲ್ಲ. 14 ಕಡೆ ಶೌಚಾಲಯವಿಲ್ಲ. ತಲಾ ಒಂದು ಅಂಗನವಾಡಿಯಲ್ಲಿ ನೀರು ಹಾಗೂ ವಿದ್ಯುತ್ ಇಲ್ಲ. 1,204 ಅಂಗನವಾಡಿಗಳಿಗೆ ಕಾಂಪೌಂಡ್ ಹಾಗೂ 1066 ಕಡೆ ಆಟದ ಮೈದಾನವಿಲ್ಲ. 11 ಕಟ್ಟಡಗಳಲ್ಲಿ ಫ್ಯಾನ್ ಇಲ್ಲ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.