ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ಕಾಳುಕಟ್ಟದ ಮೆಕ್ಕೆಜೋಳ: ರೈತನಿಂದ ಬೆಳೆ ನಾಶ

Published : 17 ಸೆಪ್ಟೆಂಬರ್ 2024, 20:01 IST
Last Updated : 17 ಸೆಪ್ಟೆಂಬರ್ 2024, 20:01 IST
ಫಾಲೋ ಮಾಡಿ
Comments

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಆಳೆತ್ತರ ಬೆಳೆದರೂ ಒಂದು ಕಾಳು ಕೂಡ ಕಟ್ಟಲಿಲ್ಲ ಎಂದು ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಅವರು ತಾವು ಬೆಳೆದ 3 ಎಕರೆ ಮೆಕ್ಕೆಜೋಳದ ಬೆಳೆಯನ್ನು ಮಂಗಳವಾರ ಸಂಪೂರ್ಣ ನಾಶಪಡಿಸಿದ್ದಾರೆ.

ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಕಾಕೋಳ ಗ್ರಾಮದಲ್ಲೇ ಖಾಸಗಿ ಕೃಷಿ ಕೇಂದ್ರದಲ್ಲಿ ಮೆಕ್ಕೆಜೋಳದ ಬೀಜ ಖರೀದಿಸಿ, ₹ 90 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದರು.

‘ಬೆಳೆ ಆಳೆತ್ತರ ಹುಲುಸಾಗಿ ಬೆಳೆದಿತ್ತು. ಎಕರೆಗೆ 25 ರಿಂದ 30 ಕ್ವಿಂಟಲ್‌ ಬೆಳೆ ಬರುವ ನಿರೀಕ್ಷೆಯಿತ್ತು. 3 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯ ತೆನೆಯಲ್ಲಿ ಒಂದು ಕಾಳು ಕೂಡ ಕಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಿದೆ. ಅವರಿಂದ ಸ್ಪಂದನೆ ಸಿಗಲಿಲ್ಲ. ಅದಕ್ಕೆ ಮನಸ್ಸಿಗೆ ನೋವಾಗಿ,  ಮೆಕ್ಕೆಜೋಳ ಬೆಳೆ ನಾಶಪಡಿಸಿದೆ‘ ಎಂದು ರೈತ  ದ್ಯಾಮಪ್ಪ ತಿಳಿಸಿದರು.

‘ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದೆ. ಆದರೆ ಕಾಳು ಕಟ್ಟಿಲ್ಲ. ಕಾಳು ಕಟ್ಟದೇ ಇರಲು ತೇವಾಂಶ ಕಾರಣ. ಕೃಷಿ ಇಲಾಖೆಯವರು ಪರಿಶೀಲಿಸಿದ ಬಳಿಕ ಉತ್ತರ ಸಿಗಲಿದೆ’ ಎಂದು ರೈತ ಮುಖಂಡ ಚನ್ನಬಸಪ್ಪ ಕೊಂಬಳಿ ತಿಳಿಸಿದರು. 

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದಲ್ಲಿ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿದರು 
ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದಲ್ಲಿ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿದರು 
ಮುಂಗಾರು ಹಂಗಾಮಿನ ಮುಂಚೆ ರೈತರು ಬಿತ್ತನೆ ಮಾಡಿದ್ದಾರೆ. ಹೆಚ್ಚು ಮಳೆಗೆ ಕಾಳು ಕಟ್ಟುವ ಹಂತದಲ್ಲಿ ತೆನೆಯಲ್ಲಿನ ಪೋಲನ್‌ ಪುಡಿ ತೊಳೆದು ಹೋಗಿದೆ. ಪರಿಶೀಲಿಸುವೆ
ಜಿ.ಶಾಂತಮಣಿ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT