ರಾಣೆಬೆನ್ನೂರು (ಹಾವೇರಿ ಜಿಲ್ಲೆ): ‘ಜಿಲ್ಲೆಯಲ್ಲಿ ಸೆಪ್ಟೆಂಬರ್ 4ರಿಂದ ಮೂರು ದಿನ ಮೋಡ ಬಿತ್ತನೆಯನ್ನು ಪಕ್ಷಾತೀತ ಕಾಯಕದ ಕನಸು (ಪಿಕೆಕೆ) ಸಂಸ್ಥೆಯಿಂದ ಮಾಡಲಾಗುವುದು’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

‘ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಬರುವ ವಿಮಾನ ಮೂರು ದಿನ ಜಿಲ್ಲೆಯಲ್ಲಿ ಹಾರಾಟ ನಡೆಸಿ, ಲಭ್ಯವಿರುವ ಮೋಡಗಳಲ್ಲಿ ಬಿತ್ತನೆ ಮಾಡಲಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮೋಡ ಸಿಗಲಿವೆ ಎಂಬ ಮಾಹಿತಿಯಿದೆ. ಇದಕ್ಕೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿರುವೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಬರಗಾಲದ ಛಾಯೆ ಕಾಣಿಸಿದರೆ, ಮೋಡ ಬಿತ್ತನೆಯಿಂದ ಮಳೆ ಸುರಿಸಿ ರೈತರಿಗೆ ನೆರವಾಗುವೆ ಎಂದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದೆ. ಅದರಂತೆ ಈಗ ಮುಂದಾರುವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.