ಹಾನಗಲ್: ಕಳೆದ ವರ್ಷ ಮಳೆ ಕೈಕೊಟ್ಟು ಮಂಕು ಕವಿದಿದ್ದ ಮತ್ಸ್ಯೋದ್ಯಮ ಮತ್ತೆ ಚಿಗುರೊಡೆಯುವ ನಿರೀಕ್ಷೆ ಹುಟ್ಟುಹಾಕಿದೆ. ಈ ಬಾರಿಯ ಉತ್ತಮ ಮುಂಗಾರು ಮತ್ತು ಅಕ್ಟೋಬರ್ ಕೊನೆಯಲ್ಲಿ ಸುರಿದ ಅಧಿಕ ಮಳೆಯಿಂದ ತಾಲ್ಲೂಕಿನಲ್ಲಿ ಕೆರೆ–ಕಟ್ಟೆಗಳು ಭರ್ತಿಯಾಗಿವೆ.

ಮೀನುಗಾರಿಕೆ ಚಟುವಟಿಕೆಗಳು ಗರಿಗೆದರಿವೆ. ಕೆರೆ ನೀರು ಅವಲಂಬಿಸಿಕೊಂಡ ಮೀನುಗಾರರಿಗೆ ಉತ್ತಮ ಇಳುವರಿಯ ಲಕ್ಷಣಗಳು ಕಾಣಿಸುತ್ತಿವೆ. ಮೀನು ಕೃಷಿ ಈಗ ಮತ್ತೆ ಚೇತರಿಕೆಯ ಹಾದಿಯಲ್ಲಿದೆ. ವಿವಿಧ ತಳಿಯ ಮೀನು ಮರಿಗಳನ್ನು ಸಾಕಿ ಮಾರಾಟ ಮಾಡುವ ವಹಿವಾಟು ಚುರುಕು ಪಡೆದುಕೊಳ್ಳುತ್ತಿದೆ.

ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಜೂನ್-ಜುಲೈ ಅವಧಿಯಲ್ಲಿ ಮೀನು ಮರಿಗಳನ್ನು ಬಿತ್ತನೆ ಮಾಡಿದ್ದಾರೆ. ಮೀನುಗಾರಿಕೆ ಇಲಾಖೆ ಕೂಡ ಮೀನು ಮರಿಗಳನ್ನು ಬೆಳೆಸಿ ಮೀನು ಕೃಷಿ ಮಾಡುವವರಿಗೆ ವಿತರಣೆ ಮಾಡಿದೆ.

ತಾಲ್ಲೂಕಿನಲ್ಲಿ 9 ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಮತ್ತು ರೈತರು ತಮ್ಮ ಹೊಲಗದ್ದೆಯಲ್ಲಿ ನೈಸರ್ಗಿಕ ಹೊಂಡ, ಕೃತಕ ಕೃಷಿ ಹೊಂಡಗಳಲ್ಲಿ ಮೀನುಗಾರಿಕೆ ಮಾಡುತ್ತಾರೆ.

ಗೌರಿ, ಕಾಟ್ಲಾ, ರೊಹು, ಮೃಗಾಲ, ಗ್ರಾಸ್ಕಾರ್ಪ, ಸಿಲ್ವರ್ ಕಾರ್ಪ್ ತಳಿಯ ಮೀನು ಮರಿಗಳನ್ನು ಸಾಕಿ ಬೆಳೆಸಲಾಗುತ್ತದೆ. 7 ತಿಂಗಳ ಒಳಗಾಗಿ ಮೀನು ಇಳುವರಿ ಸಿಗುತ್ತದೆ.

ಇಲ್ಲಿನ ಮೀನುಗಾರಿ ಇಲಾಖೆ 2 ಎಕರೆ ವಿಸ್ತೀರ್ಣದ ಆವರಣದಲ್ಲಿ ಮೀನು ಮರಿ ಸ್ಪಾಮ್ ಬೆಳೆಸಲು 5 ಸಿಮೆಂಟ್ (ಪಾಂಡ್) ತೊಟ್ಟಿಗಳನ್ನು ಹೊಂದಿದೆ. ಇಷ್ಟೆಲ್ಲ ಸೌಕರ್ಯವಿದ್ದರೂ, ಮೀನು ಕೃಷಿಗೆ ಪೂರಕವಾಗಿ ಕೆಲಸ ಮಾಡುವ ಮೀನುಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.

ಇಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಇರುವ 5 ಹುದ್ದೆಗಳು ಖಾಲಿ ಇವೆ. ಸಹಾಯಕ ನಿರ್ದೇಶಕ ಹುದ್ದೆಯಲ್ಲಿರುವ ಅಧಿಕಾರಿ ಎಸ್.ಪಿ.ದಂದೂರ ಅವರು ಹಾನಗಲ್ ಸೇರಿ ಬೇರೆ ತಾಲ್ಲೂಕುಗಳಿಗೂ ಪ್ರಭಾರಿ ಹುದ್ದೆಯಲ್ಲಿದ್ದಾರೆ. ಹಾನಗಲ್ ಇಲಾಖೆಯಲ್ಲಿ ನೇಮಕಗೊಂಡ ಒಬ್ಬ ಹೊರಗುತ್ತಿಗೆ ನೌಕರ ಎಲ್ಲವನ್ನು ಸಂಬಾಳಿಸುವ ಅನಿವಾರ್ಯತೆ ಇದೆ.

ಈ ಬಾರಿ ಮೀನುಗಾರರ ಬೇಡಿಕೆಯಂತೆ 3 ಲಕ್ಷ ಮರಿಗಳನ್ನು ಬೆಳೆಸಿ ಪಿಂಗರ್ಲಿಂಕ್ ಅಳತೆ ಬಂದ ಗೌರಿ ಜಾತಿಯ ಮರಿಗಳನ್ನು ವಿತರಿಸಲಾಗಿದೆ. ಸೊಳ್ಳೆಗಳ ನಿರ್ಮೂಲನೆ ಮಾಡುವ ಗಪ್ಟಿಲ್, ಗಾಂಬೂಸಿ ಎಂಬ ಲಾರ್ವಾ ನಾಶದ ಮೀನು ಮರಿಗಳ ಸಾಕಾಣಿಕೆಗೆ ಒಂದು ಪ್ರತ್ಯೇಕ ಪಾಂಡ್ ಬಳಸಲಾಗುತ್ತಿದೆ. ಗಪ್ಟಿಲ್, ಗಾಂಬೂಸಿ ಮೀನು ಮರಿಗಳನ್ನು ಆರೋಗ್ಯ ಇಲಾಖೆ ಮೂಲಕ ಇಡೀ ಜಿಲ್ಲೆಗೆ ಇಲ್ಲಿಂದಲೇ ಪೂರೈಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಪ್ರಬಾರಿ ಸಹಾಯಕ ನಿರ್ದೇಶಕ ಎಸ್.ಪಿ.ದಂದೂರ ತಿಳಿಸಿದ್ದಾರೆ.

‘ಕಳೆದ ವರ್ಷ ಮಳೆ ಅಭಾವದಿಂದ ಕರೆಗಳಲ್ಲಿ ನೀರು ಖಾಲಿಯಾಗಿತ್ತು. ಮೀನು ಮರಿಗಳ ಬಿತ್ತನೆ ಮಾಡಿದ್ದ ಮೀನುಗಾರರು ಕಂಗಾಲಾಗಿದ್ದರು. ಮತ್ಸ್ಯೋದ್ಯಮ ನಂಬಿಕೊಂಡ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸಿದ್ದವು. ಈ ಬಾರಿ ಆಶಾದಾಯಕ ವಾತಾವರಣವಿದೆ‘ ಎಂದು ಎಂದು ಜಿಗಳ್ಳಿ ಜಲಾಶಯ ಮತ್ತು ಸಾಕಷ್ಟು ಕೆರೆಗಳನ್ನು ಮೀನುಗಾರಿಕೆ ಇಲಾಖೆಯಿಂದ ಗುತ್ತಿಗೆ ಆಧಾರದಲ್ಲಿ ಹಿಡಿದು ಮೀನುಗಾರಿಕೆ ನಡೆಸುವ ಬಮ್ಮನಹಳ್ಳಿ ಗ್ರಾಮದ ಭವಾನಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ರಜಪೂತ್ ಹೇಳುತ್ತಾರೆ.

‘ಸುಮಾರು 14 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿದ್ದೇವೆ. ಉತ್ತಮ ಇಳುವರಿ ನಿರೀಕ್ಷೆ ಹೊಂದಲಾಗಿದೆ. ಫೆಬ್ರುವರಿ ಹೊತ್ತಿಗೆ ಮೀನು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ‘ ಎಂದು ಜಿಗಳ್ಳಿ ಜಲಾಶಯ ಮತ್ತು ಸಾಕಷ್ಟು ಕೆರೆಗಳನ್ನು ಮೀನುಗಾರಿಕೆ ಇಲಾಖೆಯಿಂದ ಗುತ್ತಿಗೆ ಆಧಾರದಲ್ಲಿ ಹಿಡಿದು ಮೀನುಗಾರಿಕೆ ನಡೆಸುವ ಬಮ್ಮನಹಳ್ಳಿ ಗ್ರಾಮದ ಭವಾನಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ರಜಪೂತ್ ಹೇಳುತ್ತಾರೆ.

ಈಗ ತುಂಬಿಕೊಂಡ ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಇಳಿಯಬಾರದು. ಅಂದಾಗ ಮುಂದಿನ ವರ್ಷಕ್ಕೂ ಮೀನು ಇಳುವರಿಯಲ್ಲಿ ಕೊರತೆ ಕಾಣದು. ಜೂನ್–ಜುಲೈ ತಿಂಗಳಲ್ಲಿ ಮೀನು ಬಿತ್ತನೆ ನಡೆದಿದೆ. ಅಂದಾಜು ಜನವರಿಯಲ್ಲಿ ಇಳುವರಿ ಸಿಗುವ ಸಾಧ್ಯತೆಯಿದೆ. ಕಳೆದ ವರ್ಷದ ಮೀನು ಈಗ ಕೆರೆಗಳಲ್ಲಿ ಇಲ್ಲ. ಹೀಗಾಗಿ ಈಗ ಬೆಳೆಸಿರುವ ಮೀನುಗಳು ಹೆಚ್ಚೆಂದರೆ ಮುಕ್ಕಾಲು ಕೆ.ಜಿ ತನಕ ತೂಕಕ್ಕೆ ಮಾರಾಟಕ್ಕೆ ಲಭ್ಯವಾಗಲಿದೆ. ಅಲ್ಲದೆ, ಕೃಷಿ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕದ ಅಂಶ ಮಳೆ ನೀರು ಮೂಲಕ ಕೆರೆಗಳನ್ನು ಪ್ರವೇಶಿಸುತ್ತದೆ. ಮೀನು ಬೆಳವಣಿಗೆಯ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದು ಸುಭಾಸ ರಜಪೂರ ಅಭಿಪ್ರಾಯಪಡುತ್ತಾರೆ.

ತಾಲ್ಲೂಕಿನ ಮಾರನಬೀಡ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಹೊಂಡದಲ್ಲಿ ಮೀನು ಕೃಷಿಯ ಗುತ್ತಿಗೆ ಪಡೆದುಕೊಂಡಿರುವ ಸ್ಥಳೀಯ ಅಂಬಿಗರ ಚೌಡಯ್ಯ ಯುವಕ ಮಂಡಲದ ಅಧ್ಯಕ್ಷ ಅನಿಲಕುಮಾರ ಜಾಡರ ಪ್ರಕಾರ, ಗ್ರಾಮ ಪಂಚಾಯ್ತಿಯಿಂದ 3 ವರ್ಷದ ಅವಧಿಗೆ ಹೊಂಡವನ್ನು ಗುತ್ತಿಗೆ ಪಡೆದುಕೊಂಡು ಮೀನು ಕೃಷಿ ಆರಂಭಿಸಿದ್ದೇವೆ. ಕಾಟ್ಲಾ, ಗೌರಿ, ಮೀರಗಾಲ್, ರಘು ಜಾತಿಯ ಒಂದು ಲಕ್ಷ ಮೀನು ಮರಿಗಳನ್ನು ಹೊಂಡದಲ್ಲಿ ಸಾಕಲಾಗುತ್ತಿದೆ. ಜನೇವರಿ ಅಂತ್ಯದಲ್ಲಿ ಮೀನುಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.