ರಾಣೆಬೆನ್ನೂರು: ‘ನೇಕಾರಿಕೆ ಕೇವಲ ಹೊಟ್ಟೆ ಪಾಡಿನ ಕಸುಬಲ್ಲ. ಮಾನವರ ಮಾನ ಕಾಯುವ ಕಾಯಕ ಧರ್ಮ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಹೇಳಿದರು.

ಇಲ್ಲಿಯ ಮಾರುತಿ ನಗರದಲ್ಲಿ ರಾಜ್ಯ ಬಿಜೆಪಿ ಘಟಕ, ರಾಜ್ಯ ನೇಕಾರ ಪ್ರಕೋಷ್ಠ ಹಾಗೂ ಜಿಲ್ಲಾ ನೇಕಾರ ಒಕ್ಕೂಟದ ಆಶ್ರಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಹಿರಿಯ ನೇಕಾರರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಮನುಷ್ಯನ ಆಕಾರಕ್ಕೆ ಬಟ್ಟೆಗಳನ್ನು ತಯಾರಿಸಿ ಕೊಡುವ ನೇಕಾರರ ವೃತ್ತಿ ದೇವರಿಗೆ ಸಮಾನ. ಈಗ ಕೈಮಗ್ಗ ಉದ್ಯಮವಾಗಿ ಮಾರ್ಪಟ್ಟಿದೆ. ಗ್ರಾಮೀಣರ ಆರ್ಥಿಕತೆ ಹೆಚ್ಚಿಸುವಲ್ಲಿ ಕೈಮಗ್ಗದ ಪಾತ್ರ ಬಹು ಮುಖ್ಯವಾಗಿದೆ. ದೇಶದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಆರ್ಥಿಕ ಬಲ ತುಂಬಬೇಕು’ ಎಂದು ಹೇಳಿದರು.

‘ಕೈಮಗ್ಗ ಕ್ಷೇತ್ರವು ನಮ್ಮ ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಕೈಮಗ್ಗ ದಿನಾಚರಣೆಗೂ ಸ್ವದೇಶಿ ಆಂದೋಲನಕ್ಕೂ ಅವಿನಾಭಾವ ಸಂಬಂಧವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇಕಾರರ ಕಲ್ಯಾಣಕ್ಕಾಗಿ 2015 ರಿಂದ ಪ್ರತಿ ವರ್ಷ ಆ. 7ರಂದು ನೇಕಾರ ದಿನಾಚರಣೆ ಎಂದು ಘೋಷಿಸಿದ್ದಾರೆ’ ಎಂದು ಹೇಳಿದರು.

ನೇಕಾರ ವೃತ್ತಿ ಕೈಗೊಂಡಿರುವ ತಿಪ್ಪೇಶಪ್ಪ ಚುಂಚಾಲ, ಗೋವಿಂದಪ್ಪ ಬೈರವ, ದೇವೆಂದ್ರಪ್ಪ ಅಂಗಡಿ, ಸುಭಾಶ ಪಾಲ್ಮೀರಿ, ಶಿವಣ್ಣ ಅಂಗಡಿ, ಚೌಪದ್ ರಾಮಣ್ಣ, ಬಸಪ್ಪ ಕಾಂಬಳೆ, ಮೀನಾಕ್ಷಮ್ಮ ಜೋಗಾರ, ರತ್ನಮ್ಮ ಜೋಗಾರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಬಿಜೆಪಿ ರಾಜ್ಯ ನೇಕಾರ ಪ್ರಕೋಷ್ಠದ ಸದಸ್ಯ ಬಸವರಾಜ ಲಕ್ಷ್ಮೇಶ್ವರ, ಡಾ.ಲತಾ ಕೇಲಗಾರ, ದ್ಯಾಮಪ್ಪ ಸುಂಕಾಪುರ, ಪ್ರಕಾಶ ಅಂಗಡಿ, ಆರ್.ಟಿ.ತಾಂಬೆ, ಮಂಜುನಾಥ ಎಚ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.