ಹಾವೇರಿ: ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರು ನಗರಗಳು ಕ್ರಮೇಣ ಬೆಳೆಯುತ್ತಿದ್ದು, ಶಿಕ್ಷಣ ಹಾಗೂ ಉದ್ಯೋಗ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಿದ್ದಾರೆ. ನಗರದೊಳಗೆ ಓಡಾಡಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ, ಜನರು ನಿತ್ಯವೂ ಪರದಾಡುವಂತಾಗಿದೆ. ಎರಡೂ ನಗರಗಳಲ್ಲಿ ‘ನಗರ ಸಾರಿಗೆ’ ವ್ಯವಸ್ಥೆ ಕಲ್ಪಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

ಹಾವೇರಿ ಹಾಗೂ ರಾಣೆಬೆನ್ನೂರು ನಗರಗಳಲ್ಲಿ ಕೋವಿಡ್ ಲಾಕ್ಡೌನ್ಗೂ ಮುನ್ನ ನಗರ ಸಾರಿಗೆ ವ್ಯವಸ್ಥೆ ಆರಂಭಿಸಲಾಗಿತ್ತು. ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಇತರರಿಗೆ ಹೆಚ್ಚು ಅನುಕೂಲವಾಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ನಗರ ಸಾರಿಗೆ ಬಸ್ಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.

ಲಾಕ್ಡೌನ್ ಅವಧಿ ಮುಗಿದ ನಂತರ, ಹಾವೇರಿ ಜಿಲ್ಲೆ ಯಥಾಸ್ಥಿತಿ ಮರಳಿದೆ. ವ್ಯಾಪಾರ, ವಹಿವಾಟು, ಶಾಲೆ–ಕಾಲೇಜುಗಳು ಆರಂಭವಾಗಿದೆ. ಜನರೆಲ್ಲರೂ ಕೋವಿಡ್ ಮರೆತು ಜೀವನ ಸಾಗಿಸುತ್ತಿದ್ದಾರೆ. ಈಗ ಜನರ ಓಡಾಟಕ್ಕೆ ನಗರ ಸಾರಿಗೆ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಬಸ್ಗಳ ಓಡಾಟವನ್ನೂ ಪುನಃ ಆರಂಭಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

‘ಕೋವಿಡ್ಗೂ ಮುನ್ನ ಹಾವೇರಿ ಹಾಗೂ ರಾಣೆಬೆನ್ನೂರಿನಲ್ಲಿ ನಗರ ಸಾರಿಗೆ ವ್ಯವಸ್ಥೆ ಚೆನ್ನಾಗಿತ್ತು. ಕೋವಿಡ್ ಸಂದರ್ಭದಲ್ಲಿ ರದ್ದು ಮಾಡಿದ ಸಾರಿಗೆ ವ್ಯವಸ್ಥೆಯನ್ನು ಇದುವರೆಗೂ ಆರಂಭಿಸಿಲ್ಲ. ಇದರಿಂದ ಕಾಲೇಜಿಗೆ ಹೋಗಲು ತೊಂದರೆ ಆಗುತ್ತಿದೆ’ ಎಂದು ಗಾಂಧಿಪುರ ಪದವಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ಹೇಳಿದರು.

‘ನಗರ ಸಾರಿಗೆ ಇದ್ದರೆ, ನಗರದೊಳಗೆ ಸಂಚರಿಸಲು ಹೆಚ್ಚು ಅನುಕೂಲವಾಗುತ್ತದೆ. ಆದರೆ, ಈಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಮಾತ್ರ ಓಡಾಡುತ್ತಿವೆ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಈ ಬಸ್ನಲ್ಲಿಯೇ ನಾವು ಸಂಚರಿಸಬೇಕು. ಹಲವು ಬಾರಿ ಬಸ್ಗಳು ಸಂಪೂರ್ಣ ಭರ್ತಿಯಾಗುತ್ತವೆ. ಇಂಥ ಸಂದಣಿಯಲ್ಲಿ ಪ್ರಯಾಣಿಸುವುದೇ ದೊಡ್ಡ ಸವಾಲು’ ಎಂದು ಅಳಲು ತೋಡಿಕೊಂಡರು.

6 ಮಾರ್ಗಗಳಲ್ಲಿ 10 ಬಸ್ಗಳ ಸಂಚಾರ: ಹಾವೇರಿ ನಗರದಲ್ಲಿ ನಾಲ್ಕು ಮಾರ್ಗಗಳಲ್ಲಿ ನಗರ ಸಾರಿಗೆಯ 6 ಬಸ್ಗಳು ಸಂಚರಿಸುತ್ತಿದ್ದವು. ರಾಣೆಬೆನ್ನೂರಿನಲ್ಲಿ ಎರಡು ಮಾರ್ಗದಲ್ಲಿ 4 ಬಸ್ಗಳಿದ್ದವು. ಈ ಹತ್ತು ಬಸ್ಗಳಿಂದ, ವಿದ್ಯಾರ್ಥಿಗಳು ಹಾಗೂ ಇತರರ ಓಡಾಟಕ್ಕೆ ಅನುಕೂಲವಾಗಿತ್ತು. ಈ ಬಸ್ಗಳ ಸಂಚಾರ ಬಂದ್ ಮಾಡಿದ್ದರಿಂದ, ಎಲ್ಲರೂ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದಾಗಿ ಜನರು ದೂರುತ್ತಿದ್ದಾರೆ.

‘ಹಾವೇರಿಯ ನಿಲ್ದಾಣದಿಂದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಹಾವೇರಿ ಡಿಪೊದಿಂದ ರೈಲು ನಿಲ್ದಾಣ, ಹಾನಗಲ್ ರಸ್ತೆಯ ಶ್ರೀಕಂಠಪ್ಪ ಬಡಾವಣೆಯಿಂದ ಬಸ್ ನಿಲ್ದಾಣ ಹಾಗೂ ಗಾಂಧಿಪುರ (ಕರ್ಜಗಿ ಕ್ರಾಸ್) ಪದವಿ ಕಾಲೇಜಿನಿಂದ ನಿಲ್ದಾಣದವರೆಗಿನ ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದವು’ ಎಂದು ಪ್ರಯಾಣಿಕರು ಮಾಹಿತಿ ನೀಡಿದರು.

‘ರಾಣೆಬೆನ್ನೂರಿನಲ್ಲಿ ರೈಲು ನಿಲ್ದಾಣದಿಂದ ಮಾರುತಿನಗರ ಹಾಗೂ ಅಡವಿ ಆಂಜನೇಯ ಬಡಾವಣೆ ಮಾರ್ಗಗಳಲ್ಲಿ ಬಸ್ಗಳು ಓಡಾಡುತ್ತಿದ್ದವು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ತಹಶೀಲ್ದಾರ್ ಕಚೇರಿ, ಹಲಗೇರಿ ಕ್ರಾಸ್ ಹಾಗೂ ಮಾರುತಿನಗರದ ಕಾಲೇಜು ಸ್ಥಳದವರೆಗೂ ಬಸ್ ಇತ್ತು. ವಿದ್ಯಾರ್ಥಿಗಳಿ ಮಾತ್ರವಲ್ಲದೇ, ರೈಲು ನಿಲ್ದಾಣಕ್ಕೆ ಹೋಗುವವರಿಗೂ ಈ ಮಾರ್ಗದ ಬಸ್ಗಳು ಅನುಕೂಲವಾಗಿದ್ದವು’ ಎಂದು ಹೇಳಿದರು.

ಆಟೊ ಪ್ರಯಾಣ ದರ ದುಬಾರಿ: ನಗರ ಸಾರಿಗೆ ಬಸ್ಗಳು ಸಂಚರಿಸಬೇಕಾದ ಮಾರ್ಗದಲ್ಲಿ ಆಟೊಗಳು ಓಡಾಡುತ್ತಿವೆ. ಚಾಲಕರು, ನಿಗದಿಗಿಂತ ಹೆಚ್ಚು ಪ್ರಯಾಣ ದರ ಕೇಳುತ್ತಿದ್ದಾರೆ. ಅನಿವಾರ್ಯವಾಗಿ ಜನರು, ದುಬಾರಿ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ.

‘ನಗರ ಸಾರಿಗೆ ಬಸ್ಗಳಿದ್ದ ಸಂದರ್ಭದಲ್ಲಿ ಆಟೊಗಳ ಅಗತ್ಯತೆ ಇರಲಿಲ್ಲ. ಈಗ, ನಗರದೊಳಗೆ ಆಟೊದಲ್ಲೇ ಓಡಾಡಬೇಕಿದೆ. ನಗರ ಸಾರಿಗೆ ಆರಂಭವಾದರೆ, ನಮಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಶ್ರೀಕಂಠಪ್ಪ ಬಡಾವಣೆಯ ನಿವಾಸಿ ಕೃಷ್ಣ ಹೇಳಿದರು.

ರಾಣೆಬೆನ್ನೂರಿಗೂ ಬೇಕು ನಗರ ಸಾರಿಗೆ: ರಾಣೆಬೆನ್ನೂರು ನಗರವು 5 ಕಿ.ಮೀ.ಗೂ ಹೆಚ್ಚು ವಿಸ್ತಾರಗೊಂಡಿದೆ. ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಆದರೆ, ಬಡಾವಣೆಗಳಿಗೆ ಓಡಾಟಲು ನಗರ ಸಾರಿಗೆ ಬಸ್ಗಳಿಲ್ಲ. ಆಟೊಗಳಿಗೆ ಹೋಗಬೇಕಾದರೆ, ದುಬಾರಿ ದರ ತೆರಬೇಕಾಗಿದೆ.

ತಹಶೀಲ್ದಾರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಮಾರುತಿನಗರ, ರೈಲ್ವೆ ನಿಲ್ದಾಣ, ಅಡವಿ ಆಂಜನೇಯ ಬಡಾವಣೆ, ಹೌಸಿಂಗ್ ಕಾಲೊನಿ, ಹುಣಸೀಕಟ್ಟಿ, ಗಂಗಾಜಲ ತಾಂಡೆ, ಶ್ರೀನಿವಾಸಪುರ, ಬಸಲೀಕಟ್ಟಿ ತಾಂಡಾ, ದೊಡ್ಡಪೇಟೆ, ಗುರುಕೊಟ್ಟೂರೇಶ್ವರನಗರ, ಶನೈಶ್ಚರ ಮಂದಿರ, ಆರ್ಟಿಇಎಸ್ ಕಾಲೇಜು, ಶಿವಾಜಿನಗರ, ಎಪಿಎಂಸಿ ಜಾನುವಾರು ಮಾರುಕಟ್ಟೆ, ನೇಕಾರ ಕಾಲೊನಿ ಪ್ರದೇಶಗಳು ಎರಡ್ಮೂರು ಕಿ.ಮೀ. ಅಂತರದಲ್ಲಿವೆ. ಇಲ್ಲಿ ಪ್ರದೇಶಗಳಿಗೆ ಓಡಾಡವೂ ಬಸ್ಗಳ ಅಗತ್ಯವಿದೆ.

ಎಸ್ಟಿಜೆಐಟಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕೆ.ಬಿ. ಕೋಳಿವಾಡ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಾರುತಿನಗರದಿಂದ ರೈಲ್ವೆ ನಿಲ್ದಾಣಕ್ಕೆ ಮತ್ತು ಅಡವಿ ಆಂಜನೇಯ ಬಡಾವಣೆಗೆ ನಗರಸಾರಿಗೆ ಆರಂಭಿಸಿದ್ದರು. ಒಂದು ವರ್ಷದ ನಂತರ, ಬಸ್ ಸಂಚಾರವೇ ಬಂದ್ ಆಯಿತು. ನಂತರದ ಅವಧಿಯಲ್ಲಿ ಜಿ.ಶಿವಣ್ಣ ಶಾಸಕರಾಗಿದ್ದಾಗ ಬಸ್ ಆರಂಭವಾದರೂ ಸರಿಯಾಗಿ ನಿರ್ವಹಣೆ ಆಗಲಿಲ್ಲ.

ಬಸ್ಗೆ ಪ್ರಯಾಣ ದರ ₹ 12 ಇತ್ತು. ಆಟೊದವರು ಒಬ್ಬರಿಗೆ ₹ 10 ಪಡೆದು, ಬಸ್ ಮಾರ್ಗದಲ್ಲಿ ಸಂಚರಿಸಲಾರಂಭಿಸಿದರು. ಇದರಿಂದಾಗಿ ಬಸ್ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಆರ್ಥಿಕ ಹೊರೆಯಾಗಿದ್ದರಿಂದ, ನಗರ ಸಾರಿಗೆ ಬಸ್ಗಳ ಸಂಚಾರವನ್ನು ಅಧಿಕಾರಿಗಳು ಬಂದ್ ಮಾಡಿಸಿದರು.

(ಪೂರಕ ಮಾಹಿತಿ: ಮುಕ್ತೇಶ್ವರ ಪಿ. ಕೂರಗುಂದಮಠ)

ಹಾವೇರಿ–ರಾಣೆಬೆನ್ನೂರು ನಗರಗಳ ಹೊರವಲಯಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸಂಚಾರಕ್ಕೆ ನಗರ ಸಾರಿಗೆ ಬಸ್ಗಳ ಅಗತ್ಯವಿದೆ. ಅಧಿಕಾರಿಗಳು ನಗರ ಸಾರಿಗೆ ಆರಂಭಿಸಲು ಒತ್ತು ನೀಡಬೇಕು

–ಬಸವರಾಜ ಎಸ್ಎಫ್ಐ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ

ರಾಣೆಬೆನ್ನೂರಿನ ಸದ್ಯದ ಬಸ್ ನಿಲ್ದಾಣವನ್ನು ನಗರ ಸಾರಿಗೆ ನಿಲ್ದಾಣ ಮಾಡಬೇಕು. ಮತ್ತೊಂದು ಕಡೆ ಹೊಸ ಬಸ್ ನಿಲ್ದಾಣ ಆರಂಭಿಸಿ ಪರ ಊರಿನ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು

–ಆರ್.ಟಿ. ತಾಂಬೆ ರಾಣೆಬೆನ್ನೂರಿನ ಮಾರುತಿನಗರ ನಿವಾಸಿ

ಶಿಥಿಲಾವಸ್ಥೆಯಲ್ಲಿ ತಂಗುದಾಣಗಳು

ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಯಾಗಿ 1997ರಲ್ಲಿ ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಹಾವೇರಿ ನಗರದ ಹಲವು ಕಡೆಗಳಲ್ಲಿ 2013ರಲ್ಲಿ ₹ 40 ಲಕ್ಷ ಖರ್ಚು ಮಾಡಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ನಗರ ಸಾರಿಗೆ ಬಸ್ ಓಡಾಟವಿಲ್ಲದಿದ್ದರಿಂದ ಎಲ್ಲ ತಂಗುದಾಣಗಳು ಶಿಥಿಲಾವಸ್ಥೆಗೆ ತಲುಪಿವೆ. ನಗರ ಸಭೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕಾರದಿಂದ ನಗರ ಸಾರಿಗೆ ಆರಂಭಿಸಿದ್ದರು. ಇದಾದ ಒಂದೇ ತಿಂಗಳಿನಲ್ಲಿ ನಗರ ಸಾರಿಗೆ ಬಂದ್ ಆಗಿದೆ. ನಗರಸಭೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ‘ನಗರದ ಪ್ರಮುಖ ಸ್ಥಳಗಳಲ್ಲಿ ತಂಗುದಾಣ ನಿರ್ಮಿಸಲಾಗಿದೆ. ಬಸ್ಗಳು ಇಲ್ಲದಿದ್ದರೆ ತಂಗುದಾಣಗಳ ಕಬ್ಬಿಣ ತುಕ್ಕು ಹಿಡಿದಿವೆ. ಕಸದ ತೊಟ್ಟಿಯಂತೆ ತಂಗುದಾಣಗಳು ಗೋಚರಿಸುತ್ತಿವೆ’ ಎಂದು ಜನರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.