ಹಾವೇರಿ: ‘ಹಾವೇರಿಗಷ್ಟೇ ಶಿಕ್ಷಣ ಸಂಸ್ಥೆಗಳು ಸೀಮಿತವಾಗಿದ್ದ ಸಮಯದಲ್ಲಿ ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಸ್ಥಾಪಿಸಲಾದ ಮೃತ್ಯುಂಜಯ ವಿದ್ಯಾಪೀಠ, ಶತಮಾನೋತ್ಸವ ಸಂಭ್ರಮದಲ್ಲಿದೆ. ಆಡಳಿತ ಮಂಡಳಿ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಸೇರಿ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯಾಪೀಠದ ಆವರಣದಲ್ಲಿ ಡಿ. 9ರಂದು ಬೆಳಿಗ್ಗೆ 10 ಗಂಟೆಗೆ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮೈಸೂರು ಸತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿರಾಳಕೊಪ್ಪದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಹಳೇ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಸ್ವಾತಂತ್ರ್ಯಕ್ಕೂ ಮುನ್ನ ಶಿಕ್ಷಣ ಸಂಸ್ಥೆಗಳ ಕೊರತೆ ಸಾಕಷ್ಟಿತ್ತು. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ, ಪುರಾತನ ಹಿನ್ನೆಲೆಯುಳ್ಳ ಹಂಸಭಾವಿ ಗ್ರಾಮದಲ್ಲಿ 1918ರಲ್ಲಿ ಮೃತ್ಯುಂಜಯ ವಿದ್ಯಾಪೀಠ ಸ್ಥಾಪನೆಯಾಯಿತು. 26 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯ ಶಾಲೆಗಳಲ್ಲಿ ಈಗ 3,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ’ ಎಂದು ಹೇಳಿದರು.

‘ವಿದ್ಯಾಪೀಠದ ಅಡಿಯಲ್ಲಿ ಎರಡು ಪ್ರಾಥಮಿಕ ಶಾಲೆಗಳು, ಎರಡು ಪ್ರೌಢಶಾಲೆಗಳು, ಒಂದು ಶಿಕ್ಷಕರ ತರಬೇತಿ ಸಂಸ್ಥೆ, ಪದವಿ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಡಿಪ್ಲೊಮಾ ಕಾಲೇಜು ನಡೆಸಲಾಗುತ್ತಿದೆ. ಓದು– ಬರಹದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಸೇರಿದಂತೆ ಹಲವರು ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು. ಮಾಜಿ ವಿಧಾನಸಭಾಧ್ಯಕ್ಷ ಬಿ.ಜಿ. ಬಣಕಾರ, ಹಾಲಿ ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ನೆಹರು ಓಲೇಕಾರ, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಸಹ ವಿದ್ಯಾಪೀಠದಲ್ಲಿ ಓದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲ, ಟಿ.ಆರ್. ನೇಸ್ವಿ, ವೀರನಗೌಡರು ಇದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಚೀನಾದಲ್ಲಿ ಕೆಲಸ ಮಾಡುತ್ತಿರುವ ಐಎಫ್ಎಸ್ (ಭಾರತೀಯ ವಿದೇಶಿ ಸೇವೆ) ಅಧಿಕಾರಿ ಶಂಭು ಹಕ್ಕಿ ಅವರೂ ಇದೇ ಶಾಲೆ ವಿದ್ಯಾರ್ಥಿ’ ಎಂದು ಕೆರೂಡಿ ಹೇಳಿದರು.

‘ದುರ್ಗ ಪ್ರೌಢಶಾಲೆಯ ಶತಮಾನೋತ್ಸವ, ನಾಗೂಬಾಯಿ ಮಾಮಲೆ ದೇಸಾಯಿ ಬಾಲಿಕಾ ಪ್ರೌಢಶಾಲೆ ಹಾಗೂ ಮಹಾಂತಸ್ವಾಮಿ ಕಲಾ– ವಿಜ್ಞಾನ– ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ, ರೂರಲ್ ಪಾಲಿಟೆಕ್ನಿಕ್ ಹಾಗೂ ಮೃತ್ಯುಂಜಯ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವವನ್ನೂ ಇದೇ ವರ್ಷವೇ ಆಚರಿಸಲಾಗುತ್ತಿದೆ. ಈ ಶಾಲೆ–ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ವಿದ್ಯಾಪೀಠದ ಜಾಲತಾಣವನ್ನು ಅನಾವರಣಗೊಳಿಸಲಾಯಿತು.

ಆಡಳಿತ ಮಂಡಳಿ ಉಪಾಧ್ಯಕ್ಷ ವಿಜಯಾನಂದ, ಸದಸ್ಯರಾದ ಪ್ರಬಣ್ಣ ಬಳಗಾನೂರ. ಎಸ್.ವಿ. ಪಾಟೀಲ, ಸಿದ್ದಲಿಂಗಪ್ಪ ಕೆಂಬಿ, ಬಸವರಾಜ್ ಒಳಗಡ್ಡಿ, ಲಿಂಗರಾಜ ಎಲಿ, ಜಗದೀಶ ಕೆರೂಡಿ, ಪ್ರಾಂಶುಪಾಲರಾದ ಎಸ್.ಎ. ತಿಪ್ಪೇಶ್, ಎಸ್. ಕೆ. ಚನ್ನವೀರ ಗೌಡ್ರ, ಮುಖ್ಯ ಶಿಕ್ಷಕ ಜಯಪ್ಪ ಸೋಮಸಾಗರ, ಸುರೇಶ ಹೊಸಮನಿ, ಎಂ.ಎಂ. ಅಕ್ಕಿ, ಜಿ.ಆರ್. ಕೆಂಚಕ್ಕನವರ, ಕಿರಣಕುಮಾರ್, ಎನ್.ಸಿ. ಪಾಟೀಲ, ಎ.ಎಸ್. ಶಿವರಾಜ್, ಸಂದೀಪ ಬಾಸೂರು ಇದ್ದರು.

ಡಿ. 2ರಿಂದ 6ರವೆಗೆ ವಿಶೇಷ ಕಾರ್ಯಕ್ರಮ

‘ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವ ಅಂಗವಾಗಿ ಡಿ. 2ರಿಂದ 6ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಆಡಳಿತ ಮಂಡಳಿ ಉಪಾಧ್ಯಕ್ಷ ವಿಜಯಾನಂದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ. 2ರಂದು ಬೆಳಿಗ್ಗೆ 7.30 ಗಂಟೆಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಕ್ರೀಡಾಪಟುಗಳಿಗಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವೃತ್ತದಿಂದ ವಿದ್ಯಾಪೀಠದ ಆವರಣದವರೆಗೆ ಮ್ಯಾರಥಾನ್ ಜರುಗಲಿದೆ’ ಎಂದರು. ‘ಡಿ. 2ರಂದು ರಾಜ್ಯಮಟ್ಟದ ಕೋ–ಕೋ ಪಂದ್ಯಾವಳಿ ಹಾಗೂ ಡಿ. 3ರಂದು ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಡಿ. 4ರಂದು ನೃತ್ಯ ಸ್ಪರ್ಧೆ ನಡೆಯಲಿದೆ. ಅಂದು ಮಧ್ಯಾಹ್ನ 2.30 ಗಂಟೆಗೆ ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದ ತಂಡದವರಿಂದ ಮಲ್ಲಕಂಬ ಪ್ರದರ್ಶನವಿದೆ. ಡಿ. 5ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ. 6ರಂದು ತಾಲ್ಲೂಕು ಮಟ್ಟದ ಚಿತ್ರಕಲಾ ಹಾಗೂ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳ ಪ್ರದರ್ಶನ ಜರುಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.