ಕುಮಾರಪಟ್ಟಣ: ರಾಣೆಬೆನ್ನೂರು ತಾಲ್ಲೂಕಿನ ಹನುಮನಹಳ್ಳಿ ಒಂದು ಪುಟ್ಟ ಗ್ರಾಮ. ವ್ಯವಸಾಯ ಇಲ್ಲಿನ ಜನರ ಪ್ರಮುಖ ಕಸುಬು. ಶೇ 80ಕ್ಕೂ ಹೆಚ್ಚು ಜನರು ಕೃಷಿ ಭೂಮಿ ಹೊಂದಿದ್ದಾರೆ. ಆದರೆ ವಲಸೆ ಬಂದ ಕುಟುಂಬಗಳು ಭೂಮಿ ಇಲ್ಲದೇ ಕೂಲಿಯನ್ನು ಅವಲಂಬಿಸಿವೆ.

ಇಲ್ಲಿನ ರೈತರು ಹತ್ತಿ, ಭತ್ತ, ಮೆಕ್ಕೆಜೋಳ, ಅಡಿಕೆ, ತೆಂಗು, ಬಾಳೆ, ಬೆಳ್ಳುಳ್ಳಿ, ಸೊಯಾಬೀನ್, ಕುಂಬಳ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

‘ಪ್ರತಿವರ್ಷ ಮೂರು ದಿನಗಳ ಕಾಲ ಗ್ರಾಮದ ಮುರುಡ ಬಸವೇಶ್ವರ ಸ್ವಾಮಿ ಉತ್ಸವ ವಿಬೃಂಭಣೆಯಿಂದ ಜರುಗಲಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಪ್ರತಿ ಶುಕ್ರವಾರ ಹರಕೆ ಹೊತ್ತ ಭಕ್ತರು ಪಾಲಿಕೆ ಮೂಲಕ ಆಹ್ವಾನಿಸುತ್ತಾರೆ. ಹೊರ ಜಿಲ್ಲೆಗಳಿಗೂ ಆಹ್ವಾನಿಸುವ ಸಂಪ್ರದಾಯ ಇಂದಿಗೂ ಮುಂದುವರೆದಿದೆ’ ಎನ್ನುತ್ತಾರೆ ಯಮುನಪ್ಪ ಹರನಗಿರಿ ಹಾಗೂ ರಾಜಶೇಖಗೌಡ ಪಾಟೀಲ.

‘ರಾಚೋಟಿ ವೀರಭದ್ರೇಶ್ವರ ಸ್ವಾಮಿ ಆರಾಧನೆ ವಿಶೇಷವಾಗಿ ನಡೆಯುತ್ತದೆ. ಮುರುಡ ಬಸವೇಶ್ವರ ಹಾಗೂ ರಾಚೋಟಿ ವೀರಭದ್ರೇಶ್ವರ ಸ್ವಾಮಿ ಹೆಸರಿನಲ್ಲಿ ರುದ್ರಾಭಿಷೇಕ, ಹೋಮ, ಗುಗ್ಗಳ, ಅನ್ನಸಂತರ್ಪಣೆ ನಡೆಯುತ್ತವೆ’ ಎನ್ನುತ್ತಾರೆ ಗ್ರಾ.ಪಂ ಸದಸ್ಯ ನಾಗರಾಜ ಸಣ್ಣಮನಿ

ಹಾರ್ಮೋನಿಯಂ ಕಲಾವಿದ ಚನ್ನಯ್ಯ ಕುಸುಗೂರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಭಜನೆ ಸೇವೆ ಮಾಡುವ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದಾರೆ. ಗ್ರಾಮದ ಪಕ್ಕದಲ್ಲಿ ಚಿಕನ್ ಫ್ಯಾಕ್ಟರಿ ಇದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ದೊರೆತಿವೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಸೇರಿದಂತೆ ಆಂಜನೇಯಸ್ವಾಮಿ ದೇಗುಲವಿದೆ.

‘ಇಲ್ಲಿ 250ಕ್ಕೂ ಹೆಚ್ಚು ಕುಟುಂಬಗಳಿದ್ದು, ಹಬ್ಬ, ಉತ್ಸವಗಳನ್ನು ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ. ರೇಣುಕಾ ಜಯಂತಿ, ವಾಲ್ಮೀಕಿ ಜಯಂತಿ, ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ, ಭಜನೆ ಕಾರ್ಯಕ್ರಮಗಳು ಜರುಗುತ್ತವೆ. ಗ್ರಾಮಸ್ಥರು ಸಡಗರದಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ’ ಎಂದು ರೇವಣೆಪ್ಪ ಬಣಕಾರ ಮತ್ತು ಬಸಪ್ಪ ಪೂಜಾರ ವಿವರಿಸುತ್ತಾರೆ.

ಹದಗೆಟ್ಟ ರಸ್ತೆ: ‘ಉಕ್ಕಡಗಾತ್ರಿ ಕರಿಬಸವೇಶ್ವರ ಸನ್ನಿಧಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ದಾವಣಗೆರೆ, ಚಿತ್ರದುರ್ಗದಿಂದ ಆಗಮಿಸುವ ಭಕ್ತರು ಇದೇ ಗ್ರಾಮದ ಮೂಲಕ ಹಾದು ಹೋಗುವ ರಸ್ತೆಯನ್ನು ಅವಲಂಬಿಸಿದ್ದಾರೆ. ಅತೀ ಹೆಚ್ಚು ವಾಹನಗಳು ಓಡಾಡುತ್ತವೆ. ವಿಪರೀತ ದೂಳಿನಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಜೊತೆಗೆ ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಕಾರುಬಾರು ಆಗಿದೆ’ ಎಂದು ಸ್ಥಳೀಯ ನಿವಾಸಿ ರಮೇಶ ಪೂಜಾರ ಬೇಸರ ವ್ಯಕ್ತಪಡಿಸುತ್ತಾರೆ.

ಶೇ 80ಕ್ಕೂ ಹೆಚ್ಚು ಕೃಷಿ ಅವಲಂಬಿತರ ಗ್ರಾಮ 250ಕ್ಕೂ ಕುಟುಂಬಗಳು ವಾಸ ಶ್ರಾವಣ ಮಾಸದಲ್ಲಿ ಪ್ರವಚನ

ಇಲ್ಲಿ ಎಲ್ಲ ವರ್ಗದವರೂ ಸಾಮರಸ್ಯದಿಂದ ಹಬ್ಬ ಉತ್ಸವಗಳನ್ನು ಆಚರಿಸುತ್ತ ಬಂದಿದ್ದೇವೆ ರಮೇಶ್

-ಪೂಜಾರ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.