ಹಾವೇರಿ ಜಿಲ್ಲೆಗೆ ಬಂದಿರುವ ದನಕರುಗಳಿಗೆ ಮೇವು ನೀರು ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು. ಗೋಪಾಲಕರಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ
– ರಘುನಂದನ ಮೂರ್ತಿ ಹಾವೇರಿ ಜಿಲ್ಲಾಧಿಕಾರಿ
‘ಚಿರತೆ’ ದನಗಳ ಸೋದರಮಾವ!
‘ಚಿರತೆ ದಾಳಿಗೆ ಪ್ರತಿವರ್ಷ 15ರಿಂದ 20 ದನಗಳು ಬಲಿಯಾಗುತ್ತವೆ. ಕುರಿಗಳಿಗೆ ತೋಳ ಹೇಗೋ ಅದೇ ರೀತಿ ದನಗಳಿಗೆ ಚಿರತೆ ಸೋದರಮಾವನಿದ್ದಂತೆ. ಹೀಗಾಗಿ ಪ್ರತಿವರ್ಷ ಸೋದರ ಮಾವನ ಪಾಲನ್ನು ಕೊಡುತ್ತೇವೆ’ ಎಂದು ಗೋಪಾಲಕ ಮಾರುತೇಶ ಗೊಲ್ಲರ್ ಮಾರ್ಮಿಕವಾಗಿ ತಿಳಿಸಿದರು. ‘ನಾವು ಶಾಲೆ ಮೆಟ್ಟಿಲು ಹತ್ತಿದವರಲ್ಲ ನಮ್ಮ ಮಕ್ಕಳು 8ರಿಂದ 10ನೇ ತರಗತಿವರೆಗೆ ಓದಿ ನಂತರ ಶಾಲೆ ಬಿಡುತ್ತಾರೆ. ದನಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿದ್ದೇವೆ. ಕಾಯಿಲೆಬಿದ್ದರೆ ನಾವೇ ಔಷಧ ಇಂಜೆಕ್ಷನ್ ತಂದು ಹಾಕುತ್ತೇವೆ. ದನ ಕಾಯುವುದು ನಮ್ಮ ಕುಲಕಸುಬು. ಜವಾರಿ ತಳಿಗಳ ಸಂರಕ್ಷಣೆ ನಮ್ಮ ಹೊಣೆಯಾಗಿದೆ’ ಎಂದು ತಿಳಿಸಿದರು.