ಶಿಗ್ಗಾವಿ: ತಾಲ್ಲೂಕಿನ ಗಂಜಿಗಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಪ್ರತಿವರ್ಷ ಶೇ 100ರಷ್ಟು ಫಲಿತಾಂಶ ಪಡೆಯುತ್ತಿರುವುದುಮಾತ್ರವಲ್ಲ, ಆವರಣದಲ್ಲಿ ಗಿಡ ಮರ ಬೆಳೆಸಿದಿದ್ದು ಸಸ್ಯಕಾಶಿಯಂತೆ ಕಂಗೊಳಿಸುತ್ತಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮೇಲುಗೈ ಸಾಧಿಸಿದೆ.

ಅರಣ್ಯ ಇಲಾಖೆ ಸಹಯೋಗದ ಮೂಲಕ ಬೆಳೆಸಲಾದವಿವಿಧ ತಳಿಗಳ 1,238 ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಪ್ರತಿ ಮಕ್ಕಳಿಗೂ ಒಂದು ಸಸಿ ಪಾಲನೆಯ ಜವಾಬ್ದಾರಿ ನೀಡಲಾಗಿದೆ. ಬಿಡುವಿನ ವೇಳೆಯಲ್ಲಿ ಸಸಿಗಳಿಗೆ ನೀರು, ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ.

ಈ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಗರಿಷ್ಠ ಶೇ 97ರಷ್ಟು ಅಂಕ ಪಡೆದರೆ, ಶಾಲೆಯು ಶೇ 100ರಷ್ಟು ಫಲಿತಾಂಶ ಪಡೆಯುತ್ತಿದೆ. ಹೀಗಾಗಿ, ಶಾಲಾ ಆರಂಭದಲ್ಲಿ 60ರಷ್ಟಿದ್ದ ಮಕ್ಕಳ ಸಂಖ್ಯೆಯು ಈಗ 260ಕ್ಕೆ ಏರಿದೆ. ಎಂಟು ಬೋಧಕರು, ಮೂವರು ಬೋಧಕೇತರ ಸಿಬ್ಬಂದಿ, ಶುಶ್ರೂಷಕಿ, ಜವಾನ, ಇಬ್ಬರು ವಾಚಮನ್, ಒಂಬತ್ತು ಅಡುಗೆಯವರು ಇದ್ದಾರೆ.

ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಕೂಟದಲ್ಲಿ ಹಲವು ಬಾರಿ ತಾಲ್ಲೂಕು ಮಟ್ಟದ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾರ್ಥಿ ಸುನೀಲ್ ತಳ್ಳಳ್ಳಿ ‘ವಿದ್ಯಾರ್ಥಿ ವಿಜ್ಞಾನ ಪ್ರದರ್ಶನ’ದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಏಡ್ಸ್ ಜಾಗೃತಿ ಕುರಿತ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಜ್ಯೋತಿ ಪೂಜಾರ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಕ್ಕಳಿಗೆ ಪಠ್ಯ ಮನದಟ್ಟು ಮಾಡಲು ಪ್ರಾಯೋಗಿಕವಾಗಿ ವಿವರಿಸುವುದು ಮತ್ತು ಪ್ರಯೋಗ ಮಾಡಲಾಗುತ್ತಿದೆ.ಆನ್‌ಲೈನ್ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಸುರಕ್ಷತೆಗಾಗಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಲಾಗಿದೆ.ವಾರದಲ್ಲಿ ಮೂರು ಬಾರಿ ಉಪನ್ಯಾಸ ಆಯೋಜಿಸಗುತ್ತಿದೆ.

ಸರ್ವಶಿಕ್ಷಣ ಅಭಿಯಾನ ಮತ್ತು ಶಿಕ್ಷಣ ಇಲಾಖೆ ಸಹಕಾರದ ಮೂಲಕ ಪುಸ್ತಕ ದೇಣಿಗೆ ಪಡೆದಿದ್ದೇವೆ. ಇದರಿಂದವಿದ್ಯಾಥಿಗಳ ಓದಿಗೆ ನೆರವಾಗಿದೆ. ಹಲವು ಪೋಷಕರ ಕೊಡುಗೆ, ಸಹಕಾರ ಸಾಕಷ್ಟಿವೆ ಎನ್ನುತ್ತಾರೆ ಪ್ರಾಚಾರ್ಯ ಎಸ್.ಎಸ್.ಹೆಬ್ಬಳ್ಳಿ.

ಓದುವ ಹವ್ಯಾಸದ ಜೊತೆಗೆ ಪರಿಸರ ಸ್ನೇಹ, ವಿಶೇಷ ಉಪನ್ಯಾಸ ಇತರ ಚಟುವಟಿಕೆಗಳ ಮೂಲಕ ಪ್ರತಿ ವರ್ಷ ನೂರರಷ್ಟು ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
-ಎಸ್.ಎಸ್.ಹೆಬ್ಬಳ್ಳಿ ಪ್ರಾಚಾರ್ಯ, ಮೊರಾರ್ಜಿ ದೇಸಾಯಿ ಶಾಲೆ ಗಂಜಿಗಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.