ಹಾವೇರಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿ ಅವರ ಜೀವನ ಹಾಗೂ ತತ್ವಾದರ್ಶಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಗಾಂಧಿಭವನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

ನಗರದ ರೈಲ್ವೆ ನಿಲ್ದಾಣ ಬಳಿ ನಿರ್ಮಿಸಲಾಗಿರುವ ಗಾಂಧಿಭವನವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದೆ. ಆರಂಭಿಕ ಹಂತದಲ್ಲಿ ಶಾಲಾ ಮಕ್ಕಳಿಗೆ ಗಾಂಧಿಭವನದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಗಾಂಧಿಭವನಕ್ಕೆ ಭೇಟಿ ನೀಡಿದ್ದ ಕೆಲ ಮಕ್ಕಳು, ಗಾಂಧಿಭವನದಲ್ಲಿರುವ ಪ್ರದರ್ಶನವನ್ನು ವೀಕ್ಷಿಸಿದರು.

ಗಾಂಧಿ ಜಯಂತಿ ಹಾಗೂ ಇತರೆ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದ ಗಾಂಧಿಭವನವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡುವ ಉದ್ದೇಶ ಜಿಲ್ಲಾಡಳಿತದ್ದಾಗಿದೆ. ಇದಕ್ಕೆ ಬೇಕಾದ ತಯಾರಿಯೂ ಭರದಿಂದ ನಡೆಯುತ್ತಿದೆ.

ನಗರದ ದೇವಗಿರಿ ಬಳಿ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲಾಗಿದ್ದು, ಇದು ಮಕ್ಕಳ ವಿಜ್ಞಾನ ಜ್ಞಾನಾಭಿವೃದ್ಧಿ ಕೇಂದ್ರವಾಗಿದೆ. ಇದರ ಜೊತೆಯಲ್ಲಿಯೇ ಇದೀಗ ಗಾಂಧಿಭವನವನ್ನು ಮಕ್ಕಳ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದ್ದು, ಗಾಂಧಿ ಜೀವನ ಹಾಗೂ ತತ್ವಗಳು ಮಕ್ಕಳಿಗೆ ಮನದಟ್ಟಾಗುವಂತೆ ತಿಳಿಯಲಿದೆ.

ಸದಾ ಬಾಗಿಲು ಹಾಕಿರುತ್ತಿದ್ದ ಗಾಂಧಿಭವನ, ಶನಿವಾರದಿಂದ ಬಾಗಿಲು ತೆರೆದಿದೆ. ಗಾಂಧಿಭವನ ಹೊರಗಿನ ಸ್ಥಳ ಹಾಗೂ ಒಳಭಾಗದಲ್ಲಿ ಸ್ವಚ್ಛತೆ ಮಾಡಲು ಸಿಬ್ಬಂದಿಯನ್ನೂ ನೇಮಿಸಲಾಗಿದೆ. ನಿರ್ವಹಣೆಗೂ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.

‘ಗಾಂಧೀಜಿ ಅವರು ಬಂದು ಹೋಗಿದ್ದ ಧರ್ಮಶಾಲಾ ಕಟ್ಟಡವಿದ್ದ ಸ್ಥಳದಲ್ಲಿಯೇ ಗಾಂಧಿಭವನ ನಿರ್ಮಿಸಲಾಗಿದೆ. ಇದುವರೆಗೂ ಕಟ್ಟಡ ವಾರ್ತಾ ಮತ್ತು ಸಾರ್ವಜನಿಮ ಸಂಪರ್ಕ ಇಲಾಖೆ ಅಧೀನದಲ್ಲಿತ್ತು. ಈಗ ಈ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಪತ್ರ ಬರೆದಿದ್ದಾರೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಧಿಕಾರಿಯವರು ಗಾಂಧಿಭವನವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ವಹಿಸುವ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ, ಶನಿವಾರ ಪ್ರಾಯೋಗಿಕವಾಗಿ ಗಾಂಧಿಭವನದಲ್ಲಿ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಮಕ್ಕಳು ಹಾಗೂ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಹೇಳಿದರು.

ಪ್ರವೇಶ ದರ ನಿಗದಿಗೆ ಚಿಂತನೆ: ಗಾಂಧಿಭವನ ನಿರ್ವಹಣೆ ಹಾಗೂ ಇತರೆ ಕೆಲಸಗಳಿಗೆ ಸಿಬ್ಬಂದಿಯ ಅಗತ್ಯವಿದೆ. ಅವರಿಗೆ ವೇತನ ನೀಡಬೇಕು. ಗಾಂಧಿಭವನದಲ್ಲಿ ಮೂಲ ಸೌಕರ್ಯ ಕಲ್ಪಿಸಲೂ ಹಣದ ಅಗತ್ಯವಿರುತ್ತದೆ. ಹೀಗಾಗಿ, ಪ್ರವೇಶ ಶುಲ್ಕ ನಿಗದಿಪಡಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

‘ಗಾಂಧಿಭವನ ಪ್ರವೇಶಕ್ಕೆ ₹ 5 ದರ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಸದ್ಯಕ್ಕೆ ಶುಲ್ಕ ಬೇಡವೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಗಾಂಧಿಭವನಕ್ಕೆ ಬರುವ ಜನರ ಸಂಖ್ಯೆಯನ್ನು ನೋಡಿಕೊಂಡು ಶುಲ್ಕದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಚಿನ್ನಿಕಟ್ಟಿ ಹೇಳಿದರು.

‘ಗಾಂಧಿಭವನಕ್ಕೆ ಭೇಟಿ ನೀಡಲು ಮಕ್ಕಳಿಗೆ ಮೊದಲಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಹಲವು ಶಾಲೆಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಕೆಲ ಶಾಲೆಗಳ ಶಿಕ್ಷಕರು, ಶನಿವಾರ ಮಕ್ಕಳನ್ನು ಗಾಂಧಿಭವನಕ್ಕೆ ಕರೆತಂದು ತೋರಿಸಿದ್ದಾರೆ’ ಎಂದು ತಿಳಿಸಿದರು.

ಕಿರು ಸಿನಿಮಾ ಪ್ರದರ್ಶನ: ಮಕ್ಕಳಿಗೆ ಗಾಂಧೀಜಿ ಜೀವನ ಹಾಗೂ ಹೋರಾಟದ ಬಗ್ಗೆ ಕಿರು ಸಿನಿಮಾ ತೋರಿಸುವ ವ್ಯವಸ್ಥೆಯೂ ಗಾಂಧಿಭವನದಲ್ಲಿದೆ.

ಗಾಂಧಿಭವನದಲ್ಲಿ ಏನಿದೆ ?

ಮಹಾತ್ಮ ಗಾಂಧೀಜಿಯವರು 1934ರಲ್ಲಿ ಹಾವೇರಿಯಲ್ಲಿ ಪ್ರವಾಸ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಾರ್ಚ್ 1ರಂದು ರೈಲ್ವೆ ನಿಲ್ದಾಣ ಬಳಿಯ ಸ್ಥಳದಲ್ಲಿ ಧರ್ಮಶಾಲಾ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡು ಅಡಿಗಲ್ಲುಗಳನ್ನು ಸಹ ಇರಿಸಲಾಗಿತ್ತು. ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ ಗಾಂಧೀಜಿ ಓಡಾಡಿದ್ದರು. ಅವರು ನೆರವೇರಿಸಿದ್ದ ಶಂಕುಸ್ಥಾಪನೆಯ ಅಡಿಗಲ್ಲುಗಳು ಇಂದಿಗೂ ಸ್ಥಳದಲ್ಲಿವೆ. ಅವುಗಳನ್ನು ಸ್ಮಾರಕ ರೀತಿಯಲ್ಲಿ ಸಂರಕ್ಷಣೆ ಮಾಡಲಾಗಿದೆ. ಗಾಂಧೀಜಿ ಭೇಟಿ ನೀಡಿದ್ದ ಸ್ಥಳವಾಗಿದ್ದರಿಂದ ಇದೇ ಜಾಗದಲ್ಲಿ ಗಾಧೀಜಿ ಭೇಟಿಯ ಸವಿನೆನಪಿನಲ್ಲಿ ಗಾಂಧಿಭವನ ನಿರ್ಮಿಸಲಾಗಿದೆ. 2024ರ ಫೆಬ್ರುವರಿ 18ರಂದು ಗಾಂಧಿಭವನವನ್ನು ಉದ್ಘಾಟಿಸಲಾಗಿದೆ. ಗಾಂಧಿಭವನದ ಆವರಣದಲ್ಲಿ ಗಾಂಧೀಜಿ ಪುತ್ಥಳಿ ದಂಡಿ ಸತ್ಯಾಗ್ರಹ ನೆನಪಿಸುವ ಪ್ರತಿಕೃತಿಗಳಿವೆ. ಗಾಂಧಿಭವನ ಒಳಗೆ ಹೋಗುತ್ತಿದ್ದಂತೆ ಗಾಂಧೀಜಿ ಜೀವನದ ಪ್ರತಿಯೊಂದು ಕ್ಷಣಗಳು ನೆನಪಿಗೆ ಬರುತ್ತವೆ. ಗಾಂಧೀಜಿ ಹಾಗೂ ಕಸ್ತೂರಬಾ ಅವರ ಪ್ರತಿಕೃತಿಗಳು ಕಣ್ಣಿಗೆ ಕಾಣುತ್ತವೆ. ಚರಕದಲ್ಲಿ ನೂಲು ನೇಯ್ಯುವ ಗಾಂಧೀಜಿ ಪ್ರತಿಮೆಯೂ ಇದೆ. ‘ಮೋಹನ್ ದಾಸ್ ಟು ಮಹಾತ್ಮ’ ಹೆಸರಿನ ಕೊಠಡಿಯಲ್ಲಿ ಬಾಪೂಜಿ ಜೀವನ ತಿಳಿಸುವ ಸ್ತಬ್ಧಚಿತ್ರಗಳು ಫೋಟೊಗಳು ಹಾಗೂ ಪರಿಕರಗಳನ್ನು ಇರಿಸಲಾಗಿದೆ. ಜನನದಿಂದ ಹಿಡಿದು ಕೊನೆ ದಿನಗಳವರೆಗಿನ ಸಂಪೂರ್ಣ ಮಾಹಿತಿ ಫೋಟೊಗಳ ಸಮೇತ ಈ ಕೊಠಡಿಯಲ್ಲಿವೆ. ಕಸ್ತೂರ ಬಾ ಕುಟೀರ ಸತ್ಯಶೋಧನೆ ಸತ್ಯಾನ್ವೇಷಣೆ ಹೃದಯ ಕುಂಚ್ (ಪ್ರಾರ್ಥನಾ ಮಂದಿರ) ಇದೆ. ಗಾಂಧಿಭವನದ ಮೊದಲ ಮಹಡಿಯಲ್ಲಿ ಸಭಾಭವನ ಹಾಗೂ ಫಿನಿಕ್ಸ್ ಕೊಠಡಿಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.