ಚಿತ್ತಾಪುರ: ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ನದಿಯಿಂದ ಅನಧಿಕೃತವಾಗಿ ಮರಳು ತೆಗೆದು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಆದರೆ ಇದನ್ನು ತಡೆಯಬೇಕಿದ್ದ ಪೊಲೀಸರೂ ಮರಳು ದಂದೆಯಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿಬರುತ್ತಿದ್ದು, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಲ್ಲೂಕಿನ ಕದ್ದರಗಿ ಗ್ರಾಮದ ಹತ್ತಿರ ಕಾಗಿಣಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಗ್ರಾಮದ ಕೆಲವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಹಶೀಲ್ದಾರ್ ಅಮರೇಶ ಬಿರಾದಾರ ಅವರು ಸೋಮವಾರ ಚಿತ್ತಾಪುರ ಪೊಲೀಸ್ ಠಾಣೆಗೆ ಪತ್ರ ಬರೆದು ಸೂಚಿಸಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ಕದ್ದರಗಿ ಗ್ರಾಮದಲ್ಲಿ ಕೆಲವರು ಕಾಗಿಣಾ ನದಿಯಿಂದ ಅನಧಿಕೃತವಾಗಿ ಮರಳು ತೆಗೆದು, ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂದು ಕಂದಾಯ ನಿರೀಕ್ಷಕರೊಬ್ಬರು, ತಹಶೀಲ್ದಾರ್ ಅವರಿಗೆ ಹೆಸರುಗಳ ಸಹಿತ ಖಚಿತ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಅಕ್ರಮವಾಗಿ ಮರಳು ದಂದೆ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ಮುಂದೆ ಹಾಜರುಪಡಿಸಬೇಕು ಎಂದು ತಹಶೀಲ್ದಾರ್ ಸೂಚಿಸಿದ್ದಾರೆ.

ಮರಳು ಅಕ್ರಮ ಸಾಗಾಣಿಕೆ ದಂದೆ ಅಡೆತಡೆಯಿಲ್ಲದೆ ನಡೆಯುತ್ತಿದೆ. ಮರಳು ತುಂಬಿದ ಟ್ರ್ಯಾಕ್ಟರ್ ಕಂಡಾಕ್ಷಣ ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯ ಕೆಲವು ನೌಕರರು ಅದನ್ನು ಕಟ್ಟುನಿಟ್ಟಾಗಿ ತಡೆಯುವ ಬದಲು ಟ್ರ್ಯಾಕ್ಟರ್ ತಡೆದು ಹಣ ಪಡೆದು ಬಿಡುತ್ತಿದ್ದಾರೆ. ಕ್ರಮಕೈಗೊಳ್ಳದೆ ಮರಳು ದಂದೆಗೆ ಸಹಕಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ತಹಶೀಲ್ದಾರ್ಗೆ ತಲುಪಿದ್ದು, ಪೊಲೀಸರ ಮೂಲಕವೇ ಮರಳು ಅಕ್ರಮ ದಂದೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಮರಳು ಅಕ್ರಮ ಸಾಗಣಿಕೆ ಕುರಿತು ತಹಶೀಲ್ದಾರ್ ಅವರು ತಮ್ಮ ಇಲಾಖೆ ಸಿಬ್ಬಂದಿಯಿಂದ ಕಾಗಿಣಾ ನದಿ ದಂಡೆಯಲ್ಲಿರುವ ಪ್ರತಿಯೊಂದು ಗ್ರಾಮದಿಂದ ಮರಳು ಸಾಗಾಣಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿರುವವರ ಹೆಸರು ಹಾಗೂ ಮಾಹಿತಿ ಸಂಗ್ರಹಿಸಿ, ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

‘ಗ್ರಾಮ ಮಟ್ಟದಲ್ಲಿ ಗ್ರಾ.ಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಗ್ರಾಮಗಳಲ್ಲಿ ನಡೆಯುವ ಅಕ್ರಮ ಮರಳು ದಂದೆಯ ಬಗ್ಗೆ ಮಾಹಿತಿ ಹೊಂದಿರುತ್ತಾರೆ. ಅವರು ತಡೆಯಲು ಮುಂದಾದರೆ ಮರಳು ದಂಧೆಕೋರರು ಅವರನ್ನೇ ಬೆದರಿಸುವ ಪ್ರಯತ್ನ ಮಾಡುತ್ತಾರೆ. ಹಿಂದೆ ಇಬ್ಬರು ಕಂದಾಯ ಅಧಿಕಾರಿಯ ಮೇಲೆ ಹಲ್ಲೆ ಯತ್ನ ನಡೆಸಿದ್ದರು. ಹೀಗಾಗಿ ಪೊಲೀಸರ ನೆರವಿಲ್ಲದೆ ಮರಳು ದಂದೆ ತಡೆಯಲು ಹೋಗುವುದು ಜೀವಕ್ಕೆ ಆಪತ್ತು ಎಂವ ಆತಂಕ ಅಧಿಕಾರಿ ವಲಯದಲ್ಲಿದೆ. ಹೀಗಾಗಿ ಮರಳು ದಂದೆ ನಡೆಯುತ್ತಿರುವುದು ತಿಳಿದಿದ್ದರೂ, ಪೊಲೀಸರ ನೆರವಿಲ್ಲದೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿಯುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದರು.

ಕರೆ ಸ್ವೀಕರಿಸದ ತಹಶೀಲ್ದಾರ್: ಮರಳು ಅಕ್ರಮ ಸಾಗಾಣಿಕೆ ಕುರಿತು ‘ಪ್ರಜಾವಾಣಿ’ಗಾಗಿ ಪ್ರತಿಕ್ರಿಯೆ ಪಡೆಯಲು ಮಂಗಳವಾರ ತಹಶೀಲ್ದಾರ್ ಅಮರೇಶ ಬಿರಾದಾರ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.