ಕಲಬುರಗಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಗಳಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಡಿವೈಎಸ್ಪಿಯಾಗಿದ್ದ ಮಲ್ಲಿಕಾರ್ಜುನ ಸಾಲಿ, ಕೆೆೆಎಸ್ಆರ್ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ಕಲ್ಯಾಣಿ ರೇವೂರ, ನೀರಾವರಿ ನಿಗಮದ ಎಂಜಿನಿಯರ್ ಮಂಜುನಾಥ ಮೇಳಕುಂದಿ ಸೇರಿದಂತೆ 27 ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಇತ್ತೀಚೆಗಷ್ಟೇ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಆರ್.ಡಿ. ಪಾಟೀಲ ಹಾಗೂ ಅವರ ಸಹೋದರ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠವು ಜಾಮೀನು ಮಂಜೂರು ಮಾಡಿತ್ತು.

ಅದರ ಬೆನ್ನಲ್ಲೇ ಕಾರಾಗೃಹದಲ್ಲಿದ್ದ ಎಲ್ಲ 27 ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಾಜಿ ಪಾಟೀಲ ಅವರು ಜಾಮೀನು ಮಂಜೂರು ಮಾಡಿದರು.

ದಿವ್ಯಾ ಹಾಗರಗಿ ಎಂಟು ತಿಂಗಳಿಂದ ಜೈಲಿನಲ್ಲಿದ್ದರು. ಇತ್ತೀಚೆಗೆ ಅವರ ಪತಿ ರಾಜೇಶ್ ಹಾಗರಗಿ ಸಹ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಕಳೆದ ನವೆಂಬರ್ 19ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಗುರುವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಜಾಮೀನು ಪಡೆದವರು: ಜ್ಞಾನ ಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ಕಾಶಿನಾಥ ಚಿಲ್ಲ, ಶಿಕ್ಷಕಿಯರಾದ ಸಾವಿತ್ರಿ ಕಾಬಾ, ಸುಮಾ, ಸಿದ್ದಮ್ಮ ಬಿರಾದಾರ, ಅರ್ಚನಾ ಹೊನಗೇರಿ, ಅಭ್ಯರ್ಥಿಗಳಾದ ಅಭ್ಯರ್ಥಿ ವೀರೇಶ್ ಅಲಿಯಾಸ್ ಹಳ್ಳಿ ವೀರೇಶ್, ಚೇತನ್ ನಂದಗಾಂವ, ಪ್ರವೀಣಕುಮಾರ್ ರೆಡ್ಡಿ, ಅರುಣಕುಮಾರ್ ಪಾಟೀಲ, ಡಿಎಆರ್ ಕಾನ್ಸ್ಟೆಬಲ್ ಹಯ್ಯಾಳಿ ದೇಸಾಯಿ, ಸಿಎಆರ್ ಕಾನ್ಸ್ಟೆಬಲ್ ರುದ್ರಗೌಡ ಮುಷ್ಟೂರ, ಶರಣಬಸಪ್ಪ ಬೋರಗಿ, ವಿಶಾಲ್ ಶಿರೂರ, ಮಲ್ಲಿಕಾರ್ಜುನ ಮೇಳಕುಂದಿ, ಎನ್.ವಿ. ಸುನೀಲ್, ಸುನಂದಾ ಮೂಲಗೆ, ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್ ಆಗಿದ್ದ ಮಂಜುನಾಥ ಮೇಳಕುಂದಿ, ಬೆರಳಚ್ಚು ವಿಭಾಗದ ಸಿಪಿಐ ಆಗಿದ್ದ ಆನಂದ ಮೇತ್ರಿ, ಶ್ರೀಧರ ಪವಾರ, ಶಾಂತಿಬಾಯಿ ಬಸ್ಯನಾಯ್ಕ, ಮೊಹಮ್ಮದ್ ರೇವೂರ, ಅಸ್ಲಂ ಮುಜಾವರ್, ವಸಂತರಾಯ ನರೊಬೋಳ ಎಂಬುವವರಿಗೆ ಜಾಮೀನು ಮಂಜೂರಾಗಿದೆ.

ಇದರೊಂದಿಗೆ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ 34 ಜನರಿಗೆ ಜಾಮೀನು ಮಂಜೂರಾದಂತಾಗಿದೆ.

ಪೋಷಕರೊಂದಿಗೇ ಜೈಲಿನಲ್ಲಿದ್ದ ಮಕ್ಕಳು

ದಿವ್ಯಾ ಹಾಗರಗಿ ಆಪ್ತೆ ಹೂವಮ್ಮ ಅಲಿಯಾಸ್ ಜ್ಯೋತಿ ಪಾಟೀಲಗೆ ಹಣ ನೀಡಿ ಪರೀಕ್ಷೆಯಲ್ಲಿ ಪಾಸಾಗಿದ್ದ ಸೇಡಂ ಪಟ್ಟಣದ ಶಾಂತಿಬಾಯಿ ಹಾಗೂ ಆಕೆಯ ಪತಿ ಬಸ್ಯನಾಯ್ಕ ದಂಪತಿಯ ಇಬ್ಬರು ಮಕ್ಕಳೂ ಜೈಲಿನಲ್ಲಿದ್ದರು.

ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದ್ದರಿಂದ ತಮ್ಮೊಂದಿಗೇ ಜೈಲಿನಲ್ಲಿ ಇರಿಸಿಕೊಳ್ಳಲು ಶಾಂತಿಬಾಯಿ ಮನವಿ ಮಾಡಿದ್ದರು. ಹೀಗಾಗಿ, ಮಕ್ಕಳೂ ದಂಪತಿಯೊಂದಿಗೆ ಜೈಲಿನಲ್ಲೇ ಸಮಯ ಕಳೆದರು.

ಗರ್ಭಿಣಿಯಾಗಿದ್ದ ಜ್ಯೋತಿ ಪಾಟೀಲ ಅವರಿಗೆ ಹೆರಿಗೆ ದಿನ ಹತ್ತಿರ ಬಂದಿದ್ದರಿಂದ ಜಾಮೀನು ಮಂಜೂರಾಗಿತ್ತು. ಪ್ರಕ್ರಿಯೆ ಮುಗಿದು ಬಿಡುಗಡೆಯಾಗುವುದು ವಿಳಂಬವಾಗಿದ್ದರಿಂದ ಜೈಲಿನ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.