ಕಲಬುರಗಿ: ‘ಗುಡ್ಡಗಾಡುಗಳಲ್ಲಿ ತಮ್ಮ ಜೀವನ ಕಟ್ಟಿಕೊಂಡು ದುಡಿಯುವ ಬಂಜಾರ ಸಮುದಾಯ, ಸದಾ ಸಮಾಜದ ಒಳಿತನ್ನು ಬಯಸುತ್ತದೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಬಂಜಾರ ಭವನದಲ್ಲಿ ಗುರುವಾರ ಬಂಜಾರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಂಜಾರ ಸಮುದಾಯ ಸಮಾಜದ ಕಟ್ಟ ಕಡೆಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರೂ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಸದಾ ಕಾಯಕದಲ್ಲಿ ತಮ್ಮ ಏಳಿಗೆ ಕಾಣುವ ಈ ಸಮುದಾಯದ ಕೊಡುಗೆ ಅಪಾರವಿದೆ. ಇಂತಹ ಸಮಾಜದಲ್ಲಿ ಶಿಕ್ಷಣ ಹೆಚ್ಚಾಗಬೇಕು’ ಎಂದರು.

ಮಾಜಿ ಸಚಿವ ರೇವೂನಾಯಕ ಬೆಳಮಗಿ ಮಾತನಾಡಿ, ‘ಸಮುದಾಯದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ನೋಡಿದರೆ ಸಂತಸವಾಗುತ್ತಿದೆ. ನಮ್ಮ ಕಾಲದಲ್ಲಿ ಈಗಿನ ಕಲಿಕಾ ಸೌಕರ್ಯಗಳು ಇರಲಿಲ್ಲ. ನಿಮ್ಮ ತಂದೆ–ತಾಯಿ ಜವಾಬ್ದಾರಿಯಿಂದ ಶಿಕ್ಷಣ ಕೊಡಿಸುತ್ತಿದ್ದಾರೆ. ದೊಡ್ಡ ಹುದ್ದೆಗೆ ಹೋದ ಬಳಿಕ ಸಮುದಾಯ ಹಾಗೂ ಸಮಾಜದ ಋಣ ತೀರಿಸಬೇಕು’ ಎಂದರು.

150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮುದಾಯದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದವರನ್ನು ಸನ್ಮಾನಿಸಲಾಯಿತು. ಈಚೆಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.

ಮುಗಳನಾಗಾಂವ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಬಳಿರಾಮ ಮಹಾರಾಜ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಗುಲಬರ್ಗಾ ವಿ.ವಿ. ಕುಲಪತಿ ಪ್ರೊ.ದಯಾನಂದ ಅಗಸರ, ಪಾಲಿಕೆ ಸದಸ್ಯರಾದ ಲತಾ ರವಿ ರಾಠೋಡ, ಕೃಷ್ಣಾ ನಾಯಕ, ಲಂಬಾಣಿ ವಸತಿ ನಿಲಯದ ಅಧ್ಯಕ್ಷ ರಾಮಚಂದ್ರ ಜಿ.ಜಾಧವ್, ಸಂಘದ ಅಧ್ಯಕ್ಷ ಸುನಿಲ್‌ಕುಮಾರ್ ಜಿ.ಚವ್ಹಾಣ್, ಪ್ರಧಾನ ಕಾರ್ಯದರ್ಶಿ ಸತೀಶ್ ರಾಮಚಂದ್ರ ಚವ್ಹಾಣ್, ಮುಖಂಡರಾದ ಬಾಬುರಾವ್ ಚವ್ಹಾಣ್, ವಿಠ್ಠಲ ಜಾಧವ್, ಅರವಿಂದ ಚವ್ಹಾಣ್, ಪ್ರೇಮಕುಮಾರ ರಾಠೋಡ್, ಸೇವಂತಾ ಪಿ.ಚವ್ಹಾಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.