ಕಲಬುರ್ಗಿ: ಜಿಲ್ಲೆಯ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯ ಹೊರವಲಯದಲ್ಲಿ ಶುಕ್ರವಾರ ಕಲ್ಲುಗಣಿಯಲ್ಲಿ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಮಿಥುನ್ ಜಾಧವ ಎನ್ನುವವರ ಪುತ್ರಮಂಗೇಶ ಮೃತಪಟ್ಟ ಬಾಲಕ. ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಅವರು ತಮ್ಮೊಂದಿಗೆ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಆಳವಾಗಿ ತೆಗೆದ ಗಣಿ ಕಂದಕದಲ್ಲಿ ಮಳೆ ನೀರು ತುಂಬಿಕೊಂಡಿದೆ. ಅದರ ದಡದ ಮೇಲೆ ಬಾಲಕ ಆಟವಾಡುತ್ತಿದ್ದ. ಕೆಲಸಗಾರರು ಹಾಸುಗಲ್ಲೊಂದನ್ನು ಎಳೆದಾಗ ಅದರ ಪಕ್ಕದ ಕಲ್ಲೂ ಕುಸಿಯಿತು. ಅದರೊಂದಿಗೆ ಬಾಲಕ ಕೂಡ ನೀರಿನಲ್ಲಿ ಬಿದ್ದ. ತೀವ್ರ ಪೆಟ್ಟುಬಿದ್ದ ಕಾರಣ ಬಾಲಕ ಪ್ರಾಣ ಕಳೆದುಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.