ಕಲಬುರ್ಗಿ: ಇತ್ತೀಚೆಗೆ ಬಿಡುಗಡೆಯಾದ ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಲಾಗಿದ್ದು, ಕೂಡಲೇ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬ್ರಾಹ್ಮಣ ಸಂಘದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಿನಿಮಾದಲ್ಲಿ ಜಾತಿ ನಿಂದನೆಯ ಅಂಶಗಳಿದ್ದು, ಇದನ್ನು ನಿರ್ದೇಶಿಸಿದ ನಂದಕಿಶೋರ ಹಾಗೂ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ನೀಡಿದ ಸೆನ್ಸಾರ್ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಿರ್ದೇಶಕರ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮೀಸಲಾತಿ ಅನುಷ್ಠಾನಗೊಳಿಸಿ: ಕರ್ನಾಟಕ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿಯನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣಕ್ಕೆ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನರಹರಿ ಪಾಟೀಲ್, ಪ್ರಮುಖರಾದ ನವಲಿ ಕೃಷ್ಣಾಚಾರ್ಯ, ಗುಂಡಾಚಾರ ನರಿಬೋಳ, ಕೃಷ್ಣಾಜಿ ಕುಲಕರ್ಣಿ, ಪಾಂಡುರಂಗರಾವ ಕಂಪ್ಲಿ, ರಾಘವೇಂದ್ರರಾವ ನೀಲೂರ, ದತ್ತಾತ್ರೇಯ ಭಟ್ ಪೂಜಾರಿ, ಅವಿನಾಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ರವಿ ಲಾತೂರಕರ್, ಕೆ.ಬಿ.ಕುಲಕರ್ಣಿ, ಪ್ರಸಾದ ಹರಿದಾಸ, ಚಂದ್ರಕಾಂತ ನಾಗೂರ, ಶ್ರೀಪಾದ ಜೋಶಿ, ವಿಶ್ವಾಸ್ ಮೋಗರೆಕರ್, ಅನೀಲ್ ಅಷ್ಟಗಿ, ಪವನ ಡೊಂಗರೆ, ಸೌರಭ್ ಕುಲಕರ್ಣಿ, ಗುರುರಾಜ ದೇಶಪಾಂಡೆ, ಪ್ರಸನ್ನ, ಜಯತೀರ್ಥ, ಉದಯಪಾಟೀಲ್, ವಾಸುದೇವರಾವ ಕುಳಗೇರಿ, ರಾಧಾ ಕುಲಕರ್ಣಿ, ಚಂದ್ರಿಕಾ, ಸರೋಜಿನಿ, ಸುಲೋಚನಾ, ಸುಧಾಕರ್, ವಿಜಯ ಕುಲಕರ್ಣಿ, ಅಕ್ಷಯ ಕುಲಕರ್ಣಿ, ರಾಜೇಂದ್ರ, ಪ್ರಹ್ಲಾದ, ಪ್ರಸನ್ನ ದೇಶಪಾಂಡೆ, ಗಿರೀಶ, ಶಾಮರಾವ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.