ಎದ್ದು ನಿಲ್ಲಲು ಹಿಂದುಮುಂದು!
ಎದ್ದು ನಿಲ್ಲಲು ಹಿಂದುಮುಂದು! ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು ತಮ್ಮ ಭಾಷಣದ ನಡುವೆ ಮಹಿಳಾ ಮತ್ತು ಮಕ್ಕಳ ರಕ್ಷಣೆಯ ಅಧಿಕಾರಿಗಳು ಎದ್ದು ನಿಲ್ಲುವಂತೆ ಸೂಚಿಸಿದ್ದರು. ಆಗ ಜಿಲ್ಲಾ ಮಕ್ಕಳ ಘಟಕದ ಇಬ್ಬರು ಅಧಿಕಾರಿ ಮಾತ್ರವೇ ಎದ್ದು ನಿಂತರು. ‘ಇಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಅಧಿಕಾರಿಯೂ ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವರು. ಪಿಡಿಒ ಗ್ರಾಮಲೆಕ್ಕಿಗ ಆರೋಗ್ಯ ನಿರೀಕ್ಷರು ಎದ್ದು ನಿಲ್ಲ’ ಎಂದು ಡಿಸಿ ತಾಕೀತು ಮಾಡಿದಾಗ ಎಲ್ಲರೂ ಎದ್ದು ನಿಂತರು. ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ ಕೆಲ ಅಧಿಕಾರಿಗಳು ತೆರಳುತ್ತಿದ್ದರು. ಆಯೋಜಕರು ಅವರನ್ನು ತಡೆದು ಒಳ ಕರೆದೊಯ್ದರು. ಕೆಲ ಹೊತ್ತು ಗೇಟ್ ಸಹ ಹಾಕಲಾಯಿತು.