ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯ ಕಲಬುರಗಿ ವಿಭಾಗದ ಡಿವೈಎಸ್ಪಿ ವೈಜನಾಥ ಕಲ್ಯಾಣಿ ರೇವೂರ ಅವರನ್ನು ಶುಕ್ರವಾರ ಸಂಜೆ ವಶಕ್ಕೆ ಪಡೆದರು.

ವೈಜನಾಥ ಸಹ ಹಲವು ವರ್ಷಗಳಿಂದ ಅಕ್ರಮ ನೇಮಕಾತಿಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಎಸ್ಆರ್‌ಪಿಯ ಪ್ರಶಿಕ್ಷಣಾರ್ಥಿಗಳ ತಂಡದ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ತೆರಳಿದ ಬೆನ್ನಲ್ಲೇ ಕೆಎಸ್ಆರ್‌ಪಿಯ ಹಿರಿಯ ಅಧಿಕಾರಿಯ ಬಂಧನವಾಗಿದೆ.

ವೈಜನಾಥ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದವರು. ಕೆಲ ಕಾಲ ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸಿ ಕಲಬುರಗಿಗೆ ವರ್ಗಾವಣೆಗೊಂಡಿದ್ದರು. 2008ರಲ್ಲಿ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.