ಅಫಜಲಪುರ: ‘ತಾಲ್ಲೂಕಿನ ಅರ್ಜುನಗಿ ಗ್ರಾಮ ಮಹಾರಾಷ್ಟ್ರದ ಗಡಿಭಾಗದಲ್ಲಿದ್ದು ಸಾಕಷ್ಟು ಗ್ರಾಮದಲ್ಲಿ ಸಮಸ್ಯೆಗಳಿವೆ ಹಂತಹಂತವಾಗಿ ನಿಮ್ಮೆಲ್ಲರಿಗೆ ಬೇಡಿಕೆಗಳಿಗೆ ಸ್ಪಂದಿಸಲಾಗುವುದು’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.

ವಿಧಾನಸಭೆ ಚುನವಾಣೆ ಬಳಿಕ ಮೊದಲ ಸಲ ಅರ್ಜುನಗಿ ಗ್ರಾಮಕ್ಕೆ ಆಗಮಿಸಿದ್ದ ಶಾಸಕರನ್ನು ಹಾನಗಲ್ಲ ಕುಮಾರೇಶ್ವರ ಮಠದ ಆವರಣದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಂ.ವೈ.ಪಾಟೀಲ, ‘ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ರೈಲು ಸೇತುವೆ ಚಿಕ್ಕದಾಗಿದ್ದು ಅದನ್ನು ದೊಡ್ಡದಾಗಿ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ನಿತ್ಯ ಅಫಜಲಪುರ ಬಸ್ನ ವ್ಯವಸ್ಥೆ ಮಾಡಲಾಗುತ್ತದೆ. ಆಳಂದ ತಾಲ್ಲೂಕಿನ ಹಡಲಗಿ ಗ್ರಾಮಕ್ಕೆ ಸಂಚರಿಸಲು ಸುಮಾರು ಮೂರು ಕಿಲೋಮೀಟರ್ ರಸ್ತೆ ಹಾಳಾಗಿ ಹೋಗಿದೆ ಅದನ್ನ ದುರಸ್ತಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಮುಖಂಡರಾದ ಅರುಣಕುಮಾರ ಪಾಟೀಲ, ಸಿದ್ದಾರ್ಥ ಬಸರಿಗಿಡದ, ಅನಿಲಕುಮಾರ ಕಾಚಾಪುರ, ಭೀಮರಾವ ಪಾಟೀಲ, ಗುರುಶಾಂತಪ್ಪ ಬಿರಾದಾರ, ಸಿದ್ದಯ್ಯ ಸ್ವಾಮಿ, ಸಿದ್ದನಗೌಡ ಬಿರಾದರ, ಬಾಬುರಾವ ಪಾಟೀಲ, ಅಶೋಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.