ಕಲಬುರ್ಗಿ: ಹಲ್ಲು ನೋವಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬ ಕಾರಣಕ್ಕಾಗಿ ರೋಗಿಯೊಬ್ಬರು ತನಗೆ ಚಿಕಿತ್ಸೆ ನೀಡಿದ ದಂತ ವೈದ್ಯರೊಬ್ಬರ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಎದುರಿನ ಸಿದ್ಧಗಂಗಾ ಡೆಂಟಲ್ ಕ್ಲಿನಿಕ್‌ನ ವೈದ್ಯ ಡಾ. ವಿಶ್ವನಾಥ ಪಾಟೀಲ ಇರಿತಕ್ಕೊಳಗಾದವರು. ಯಾದಗಿರಿ ಜಿಲ್ಲೆ ಸುರಪುರದ ಶ್ರೀನಿವಾಸ ಚಾರು (27) ಚಾಕು ಇರಿದ ಆರೋಪಿ.

‘ಶ್ರೀನಿವಾಸ 2013ರಿಂದಲೇ ಡಾ. ವಿಶ್ವನಾಥ ಅವರ ಬಳಿ ಹಲ್ಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ. ಹಲವು ಬಾರಿ ಚಿಕಿತ್ಸೆಗಾಗಿ ಬರುತ್ತಿದ್ದ. ಆದರೆ, ನೋವು ವಾಸಿಯಾಗಿರಲಿಲ್ಲ. ಇದೇ ದ್ವೇಷದಿಂದ ಅವರಿಗೆ ಚಾಕು ಹಾಕುವ ಸಂಚು ರೂಪಿಸಿದ ಶ್ರೀನಿವಾಸ, ಮಂಗಳವಾರ ಬೆಳಿಗ್ಗೆ ವೈದ್ಯರು ಕ್ಲಿನಿಕ್‌ಗೆ ಬರುವ ಮುಂಚೆಯೇ ಬಂದು ಕುಳಿತಿದ್ದಾನೆ. ವೈದ್ಯರು ಬಂದಿದ್ದನ್ನು ಖಚಿತಪಡಿಸಿಕೊಂಡು ಅವರ ಎದುರು ಬಂದು ಚಾಕು ಹಾಕಿದ್ದು, ತಕ್ಷಣವೇ ವಿಶ್ವನಾಥ ಅವರು ಹಿಂದೆ ಸರಿದಿದ್ದಾರೆ. ಹೊಟ್ಟೆಯ ಕೊಂಚ ಭಾಗಕ್ಕೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು’ ಎಂದು ಸ್ಟೇಶನ್ ಬಜಾರ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದರಾಮೇಶ್ವರ ತಿಳಿಸಿದರು.

‘ಶ್ರೀನಿವಾಸ ಮಾನಸಿಕ ಅಸ್ವಸ್ಥ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದರು.

ಘಟನೆ ನಡೆಯುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸಾರ್ವಜನಿಕರು ಶ್ರೀನಿವಾಸನನ್ನು ಹಿಡಿದು ಸ್ಟೇಶನ್ ಬಜಾರ್ ಠಾಣೆಯ ಪೊಲೀಸರಿಗೆ ಒಪ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.