ಕಲಬುರ್ಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಬೇರೆ ರಾಜ್ಯಗಳು ನೀಡುತ್ತಿರುವಂತೆ ವೇತನ ಹಾಗೂ ಭತ್ಯೆಯನ್ನು ಪರಿಷ್ಕರಿಸಿ ನೀಡಬೇಕು ಎಂದು ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ಬೀರೇಂದ್ರ ಕೇಶವ ಒತ್ತಾಯಿಸಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಎನ್ಎಚ್ಎಂ ಯೋಜನೆಯಡಿ ಕೆಲಸ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ₹ 25 ಸಾವಿರ ವೇತನ ಹಾಗೂ ₹ 15 ಸಾವಿರ ಭತ್ಯೆ ಸೇರಿ ₹ 40 ಸಾವಿರ ವೇತನ ನೀಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ₹ 25 ಸಾವಿರ ವೇತನ ಹಾಗೂ ಬರೀ ₹ 8 ಸಾವಿರ ಭತ್ಯೆ ನೀಡುತ್ತಿದ್ದಾರೆ. ಈ ತಾರತಮ್ಯ ನಿಲ್ಲಬೇಕು ಎಂದರು.

’ಎನ್ಎಚ್ಎಂನಡಿ ಕೆಲಸ ಮಾಡುತ್ತಿರುವವರನ್ನು ತರಬೇತಿಗೂ ಮುನ್ನ ಮಧ್ಯಮ ಹಂತದ ಆರೋಗ್ಯ ಸೇವೆ ನೀಡುವವರು ಎಂದು ಕರೆಯುತ್ತಾರೆ. ಆ ಪದನಾಮವನ್ನು ತರಬೇತಿ ಬಳಿಕವೂ ಬಳಸುತ್ತಿರುವುದು ಸರಿಯಲ್ಲ. ಸಮುದಾಯ ಆರೋಗ್ಯ ಅಧಿಕಾರಿ ಎಂದೇ ಪದನಾಮವನ್ನು ಬಳಸಬೇಕು‘ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಸಂಘದ ರಾಜ್ಯ ಉಪಾಧ್ಯಕ್ಷ ಮಮಿತ್ ಜಿ. ಗಾಯಕವಾಡ, ಜಂಟಿ ಕಾರ್ಯದರ್ಶಿ ಶ್ರೀಕಾಂತ ಪಾಟೀಲ, ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ರಾಠೋಡ, ಉಪಾಧ್ಯಕ್ಷ ರವೀಂದ್ರ ಬುಳ್ಳಾ, ಪ್ರಶಾಂತ್ ಪೌಲ್, ಕಾರ್ಯದರ್ಶಿ ಯಲ್ಲಾಲಿಂಗ ಸಿ.ಪಿ, ಓಂಕಾರ್, ಮಾಧ್ಯಮ ವಕ್ತಾರ ವಿನೋದಕುಮಾರ್ ನಾಗಲಗಾಂವ, ಮಲ್ಲಿಕಾರ್ಜುನ ನೂಲಕರ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ದಶವಂತ, ಉಪಾಧ್ಯಕ್ಷ ಗುರುರಾಜ ಅಥರ್ಗಾ, ಪರಮಾನಂದ ಹಚಡದ, ಶರಣಬಸು ಜಿ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.