ಆಳಂದ (ಕಲಬುರಗಿ ಜಿಲ್ಲೆ): ಉತ್ತರ ಪ್ರದೇಶದ ಅಯೋಧ್ಯೆಗೆ ಬೀದರ್ನ ಪ್ರವಾಸಿಗರನ್ನು ಕರೆದುಹೊಯ್ಯುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಟೆಂಪೊ ಟ್ರಾವೆಲರ್ ಚಾಲಕ ವಿಠಲ ಅಂಬಾರಾಯ ಮರಡಿ (35) ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಗುಂಜ ಬಬಲಾದನಲ್ಲಿ ಸೋಮವಾರ ಸಂಜೆ ನಡೆಯಿತು.

ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಉತ್ತರಪ್ರದೇಶ ರಸ್ತೆ ಅಪಘಾತದಲ್ಲಿ ಬೀದರ್ನ 7, ಕಲಬುರಗಿಯ ಒಬ್ಬರು ಸ್ಥಳದಲ್ಲೇ ಸಾವು

ಕಲಬುರ್ಗಿಯಲ್ಲಿ ಟೆಂಪೊ, ಕಾರು ಚಾಲಕರಾಗಿದ್ದ ವಿಠಲ ಮರಡಿ, ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ವಿವಿಧ ಯಾತ್ರಾ ಸ್ಥಳಗಳಿಗೆ ಪ್ರವಾಸಕ್ಕೆ ಯಾತ್ರಿಗಳನ್ನು ಕರೆದೊಯ್ದಿದ್ದರು.

ನೌನಿಹಾಲ್ನ ಖೇರಿ-ನನ್ಪಾರಾ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ವಿಠಲ ಸೇರಿದಂತೆ ಬೀದರ್ನ ಎಂಟು ಜನ ಮೃತಪಟ್ಟಿದ್ದರು.

ಸೋಮವಾರ ಸಂಜೆ ಉತ್ತರ ಪ್ರದೇಶದಿಂದ ಹೈದರಾಬಾದ್ವರೆಗೆ ವಿಮಾನದ ಮೂಲಕ ವಿಠಲ ಪಾರ್ಥಿವ ಶರೀರವನ್ನು ತರಲಾಯಿತು.

ಕುಟುಂಬದವರ ಆಕ್ರಂದನದ ನಡುವೆ ಅಂತ್ಯಸಂಸ್ಕಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.