ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಿಂದ ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಒಂಬತ್ತು ಜನ ಪ್ರವಾಸಿಗರು ಕೇದಾರನಾಥ ಬಳಿಯ ಗೌರಿಕುಂಡದಿಂದ ಮೇಘಸ್ಪೋಟದಿಂದ ಪಾರಾಗಿ ಬುಧವಾರ ಸುರಕ್ಷಿತವಾಗಿ ಹರಿದ್ವಾರ ತಲುಪಿದ್ದಾರೆ.

ಇದೇ 14ರಂದು ಗ್ರಾಮದ ಚಿದಾನಂದ ಸ್ವಾಮಿ, ಲಕ್ಷ್ಮಿಕಾಂತ ಪಾಟೀಲ, ಅನಂತರಾಜ ಜಗತಿ, ನಾಗರಾಜ ಜಗತಿ, ಲಕ್ಷ್ಮೀಪುತ್ರ, ಕಿಟ್ಟು ಗೌಡಪ್ಪಗೋಳ, ವೈಜನಾಥ, ವೀರೇಶ ಪಾಟೀಲ, ಮಹಾದೇವ ಪಟ್ಟಣೆ ಅವರು ಕೇದಾರನಾಥಕ್ಕೆ ತೆರಳಿದ್ದರು. ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದಾಗಿ ವ್ಯಾಪಕ ಮಳೆ ಸುರಿಯುತ್ತಿದ್ದುದರಿಂದ ಗೌರಿಕುಂಡದ ಸಣ್ಣ ಕೊಠಡಿಯಲ್ಲಿ ಕಳೆದಿದ್ದರು. ಅಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕವೂ ಕಡಿತಗೊಂಡಿತ್ತು. ಪೊಲೀಸರ ನೆರವಿನಿಂದ ಎಲ್ಲ ಯಾತ್ರಾರ್ಥಿಗಳು ಖಾಸಗಿ ವಾಹನದಲ್ಲಿ ಹರಿದ್ವಾರ ತಲುಪಿದ್ದಾರೆ. ರಾತ್ರಿ ಅಲ್ಲಿಂದ ಹೊರಟು ದೆಹಲಿ ತಲುಪಲಿದ್ದಾರೆ. ಇದೀಗ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಎಂದು ಅನಂತರಾಜ ಜುಗತಿ ಅವರ ಸಂಬಂಧಿ ರಮೇಶ ಜುಗತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತರಾಖಂಡದ ಗೌರಿಕುಂಡದಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ಪಡೆದ ಜಿಲ್ಲೆಯ ಬಿಜೆಪಿ ಮುಖಂಡ ಭೀಮಾಶಂಕರ ಪಾಟೀಲ ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಿದರು. ‘ಅಧಿಕಾರಿಗಳ ತಂಡವು ಉತ್ತರಾಖಂಡ ಸರ್ಕಾರದೊಂದಿಗೆ ಮಾತನಾಡಿ ಅವರ ಸುರಕ್ಷಿತ ಬರುವಿಕೆಯನ್ನು ಖಚಿತಪಡಿಸಿಕೊಂಡಿದೆ. ದೆಹಲಿಯಿಂದ ಶುಕ್ರವಾರ ಕಲಬುರಗಿಗೆ ವಾಪಸಾಗಲಿದ್ದಾರೆ. ಅವರಿಗೆಪ್ರಯಾಣದ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ಭೀಮಾಶಂಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.