ಕಲಬುರಗಿ: ಸ್ವಚ್ಛ ಭಾರತ ವಿಶೇಷ ಅಭಿಯಾನ 2.0 ಪ್ರಯುಕ್ತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ತನ್ನ ವಿಮಾನ ನಿಲ್ದಾಣಗಳಲ್ಲಿ ಸ್ವಚ್ಛತೆ ವಿಶೇಷ ಅಭಿಯಾನ 2.0 ಪ್ರಾರಂಭಿಸಿದೆ. ಅದರ ಭಾಗವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 31ರವರೆಗ ಸ್ವಚ್ಛತಾ ಮಿಷನ್ ಅಭಿಯಾನ ಕಾರ್ಯ ಜರುಗಲಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಈ ಅಭಿಯನಾದಡಿ ಎರಡು ಹಂತಗಳ ಕಾರ್ಯಕ್ರಮ ಯೋಜಿಸಿದ್ದೇವೆ. ಪೂರ್ವಸಿದ್ಧತಾ ಹಂತದಲ್ಲಿ ವಿಮಾನ ನಿಲ್ದಾಣದಾದ್ಯಂತ ಸೂಕ್ಷ್ಮ ಜಾಗಗಳನ್ನು ಗುರುತಿಸಿವುದು. ಎರಡನೇ ಹಂತದಲ್ಲಿ ಗುರುತಿಸಲಾದ ಜಾಗಗಳ (ಒಳ ಅಥವಾ ಹೊರ) ಸ್ವಚ್ಛತೆ, ದಾಖಲೆಗಳ ನಿರ್ವಹಣೆ, ಕಡತಗಳಲ್ಲಿನ ಕೊಳೆ ತೆಗೆಯುವುದು, ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಸೇರಿದೆ’ ಎಂದು ಅವರು ತಿಳಿಸಿದ್ದಾರೆ.

ಸಂಸತ್ ಸದಸ್ಯರು, ರಾಜ್ಯ ಸರ್ಕಾರಗಳ ಮತ್ತು ಸಂಸತ್ತಿನ ಆಶ್ವಾಸನೆಗಳ ದಾಖಲೆಗಳ ಮನವಿ ಹಾಗೂ ಶಿಫಾರಸುಗಳು, ವಿಮಾನ ನಿಲ್ದಾಣ, ಎಎಐ ಸಂಬಂಧಿತ ಕಚೇರಿಗೆ ಸಂಬಂಧಿಸಿದ ದಾಖಲೆಗಳು ಇವೆ. ನೀರಿನ ಟ್ಯಾಂಕ್ಗಳ ತಪಾಸಣೆ, ಹಳೆಯ ವಸ್ತುಗಳ ಮತ್ತು ಬಳಕೆಯಾಗದ ಸಾಮಗ್ರಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.