ಯಡ್ರಾಮಿ: ತಾಲ್ಲೂಕಿನ ಇಜೇರಿ, ಕುಕನೂರ, ಕಡಕೋಳದಲ್ಲಿ ವಿಶೇಷ ಮತದಾನ ಕೇಂದ್ರ ಹಾಗೂ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.

ಜಿ.ಪಂ ಸಿಇಒ, ತಾ.ಪಂ ಇಒ ಮಹಾಂತೇಶ ಪುರಾಣಿಕ್ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಸುಂದರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮತದಾರರನ್ನು ಕೈಬೀಸಿ ಕರೆಯುತ್ತಿವೆ.

ಆರ್ಕರ್ಷಕ ಅಷ್ಟೇ ಅಲ್ಲದೆ ಮತದಾನದ ಜಾಗೃತಿ ಮೂಡಿಸುವಂತಿವೆ. ಮತಗಟ್ಟೆಗಳ ಗೋಡೆಗಳ ಮೇಲೆ ಉತ್ತಮ ಭವಿಷ್ಯಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ, ಉತ್ತಮ ಶಿಕ್ಷಣಕ್ಕಾಗಿ, ಉತ್ತಮ ಸಮಾಜಕ್ಕಾಗಿ, ಉತ್ತಮ ಪರಿಸರಕ್ಕಾಗಿ, ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ... ಹೀಗೆ ಹಲವು ವಿಷಯಗಳ ಕುರಿತು ಮರದಲ್ಲಿ ಚಿತ್ರ ಬಿಡಿಸಿರುವುದು ಮತದಾರರಿಗೆ ಸಂದೇಶ ಸಾರುತ್ತಿವೆ.

ಮತಗಟ್ಟೆಗಳಿಗೆ ಸುಣ್ಣ–ಬಣ್ಣ ಹಚ್ಚಿ, ಗೊಡೆಯ ಮೇಲೆ ಅಂಗವಿಕಲರು ವಿಲ್ಚೇರ್ನಲ್ಲಿ ಕುಳಿತಿರುವುದು ಚಿತ್ರ ಬಿಡಿಸಲಾಗಿದೆ. ಕೈ ಮುಗಿದು ಸ್ವಾಗತಿಸುವ ಮಹಿಳೆಯ ಚಿತ್ರ ಬಿಡಿಸಲಾಗಿದ್ದು ಮತದಾರರನ್ನು ಸೆಳೆಯಲು ಆಕರ್ಷಕ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.