ಕಲಬುರಗಿ: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಮಟ್ಕಾ, ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 330 ಗ್ರಾಂ ಗಾಂಜಾ ಸೇರಿದಂತೆ ₹ 22,270 ಹಣವನ್ನು ಜಪ್ತಿ ಮಾಡಲಾಗಿದೆ.

ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಹತ್ತಿರ ಇರುವ ಕೆಎಸ್ಆರ್ಪಿ ವಸತಿಗೃಹದ ಹತ್ತಿರದ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ₹ 2500 ಮೌಲ್ಯದ ಗಾಂಜಾ, ₹ 1350 ನಗದು ಜಪ್ತಿ ಮಾಡಿದ್ದಾರೆ.

ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮ ನಗರ ಅಂಬಾಭವಾನಿ ಗುಡಿಯ ಹತ್ತಿರ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ ₹ 1260 ನಗದು ವಶಪಡಿಸಿಕೊಂಡಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗೂರ ಗ್ರಾಮದ ರಾಮಲಿಂಗೇಶ್ವರ ಗುಡಿಯ ಹತ್ತಿರ ಇಸ್ಪೀಟ್ ಆಡುತ್ತಿದ್ದ 9 ಜನರನ್ನು ಬಂಧಿಸಿ ₹ 3850 ನಗದು ಜಪ್ತಿ ಮಾಡಲಾಗಿದೆ. ಮೈನಾಳ ಗ್ರಾಮದ ದರ್ಗಾ ಬಳಿ ಇಸ್ಪೀಟ್ ಆಡುತ್ತಿದ್ದ 7 ಜನರನ್ನು ಬಂಧಿಸಿ ₹ 11,810 ನಗದು ವಶಪಡಿಸಿಕೊಂಡಿದ್ದಾರೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲೂರ ಕ್ರಾಸ್ ಹತ್ತಿರ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದವನನ್ನು ಬಂಧಿಸಿ ಆತನಿಂದ ₹ 1500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.