ಕಮಲಾಪುರ: ‘ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಹುತೇಕ ಗ್ರಾಮ ಹಾಗೂ ಪಟ್ಟಣಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡಗಟ್ಟಬೇಕು’ ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಗ್ರಾಮೀಣ ಮತಕ್ಷೇತ್ರದ ಉಸ್ತುವಾರಿ ಅಂಬಾರಾಯ ದಸ್ತಾಪುರ ಕಮಲಾಪುರ ತಹಶೀಲ್ದಾರ್ ಮೋಸಿನ್ ಅಹಮ್ಮದ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧ ಹಾಗೂ ಮಾರಾಟ ಮಾಡುವವರ ವಿರುದ್ಧ, ಸಹಕರಿಸುತ್ತಿರುವ ಅಬಕಾರಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಆಗ್ರಹಿಸಿದ್ದಾರೆ.

ಶಾಲೆ, ದೇವಸ್ಥಾನ, ಮಹಾಪುರುಷರ ಪುತ್ಥಳಿ ಬಳಿ ಇರುವ ಮದ್ಯದಂಗಡಿ ತೆರವುಗೊಳಿಸಬೇಕು. ಪ್ರತಿ ಹಳ್ಳಿಗೆ ಪೋಲಿಸ ಕಾನ್ಸ್ಟೆಬಲ್ ನೇಮಿಸಿ ಅಕ್ರಮವಾ ನಡೆಯುತ್ತಿರು ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರವಿ ಆರ್. ಕೋರಿ, ಶಂಭುಲಿಂಗ ಸಿಂಗೆ, ವಿಜಯಕುಮಾರ ವದರಿ, ಗುರುಲಿಂಗ ಪ್ರಬುದ್ಧಕರ, ವಿಠಲ ಕೋಣೆಕರ, ಸೋಮಶೇಖರ ಬಂಗರಗಾ, ಬಾಲಚಂದ್ರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.