ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕದಾಸ ಜಯಂತ್ಯುತ್ಸವ ಸಡಗರ; ಬೈಕ್‌ ರ‍್ಯಾಲಿ ಸಂಭ್ರಮ, ಅದ್ದೂರಿ ಮೆರವಣಿಗೆ

Published : 19 ನವೆಂಬರ್ 2024, 5:01 IST
Last Updated : 19 ನವೆಂಬರ್ 2024, 5:01 IST
ಫಾಲೋ ಮಾಡಿ
Comments
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾಳಿಂಗರಾಯ ಮಹಾರಾಯ ಗುರುನಾಥ ಪೂಜಾರಿ ಪಾಲ್ಗೊಂಡಿದ್ದರು
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾಳಿಂಗರಾಯ ಮಹಾರಾಯ ಗುರುನಾಥ ಪೂಜಾರಿ ಪಾಲ್ಗೊಂಡಿದ್ದರು
ತಿಮ್ಮಪ್ಪನಾಗಿ ಹುಟ್ಟಿ ಸಾಮಾನ್ಯರಾಗಿ ಬೆಳೆದು ನಾಯಕರಾಗಿ ದುಡಿದು ದಾಸ ಶ್ರೇಷ್ಠರಾಗಿ ಹೊರಹೊಮ್ಮಿದ ಮಹನೀಯರು ಕನಕದಾಸರು. ಅವರು ಮನುಕುಲದ ಶ್ರೇಷ್ಠ ಸಂತ.
ಅಲ್ಲಮಪ್ರಭು ಪಾಟೀಲ ಶಾಸಕ
ಮುಂದಿನ ಎರಡು ತಿಂಗಳಲ್ಲಿ ಕಲಬುರಗಿ ಬೆಳಗಾವಿ ಮೈಸೂರು ವಿಭಾಗದಲ್ಲಿ ಕುರುಬ ಸಮಾಜದ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ
ದೇವಿಂದ್ರಪ್ಪ ಮರತೂರ ಅಧ್ಯಕ್ಷ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
ಕನಕರ ಚಿತ್ರದ ಅದ್ದೂರಿ ಮೆರವಣಿಗೆ
ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕಲಬುರಗಿಯ ನಗರೇಶ್ವರ ಶಾಲೆಯಿಂದ ಡಾ.ಎಸ್‌.ಪಂಡಿತ್‌ ರಂಗಮಂದಿರದ ತನಕ ಕನಕದಾಸರ ಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಬೆಳಿಗ್ಗೆ 10.30ರ ವೇಳೆಗೆ ಕನಕರ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್‌.ಡಿ. ಎಸ್ಪಿ ಅಡ್ಡೂರು ಶ್ರೀನಿವಾಸಲು ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಪೂಜಾರಿ ಸೇರಿದಂತೆ ಹಲವು ಅಧಿಕಾರಿಗಳು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ರಾಯಣ್ಣನ ಹಾಡುಗಳು ಕನಕರ ಕೀರ್ತನೆಗಳು ಮೊಳಗಿದವು. ಡೊಳ್ಳು ವಾದನ ತಮಟೆ ಸದ್ದು ಡಿ.ಜೆ. ಅಬ್ಬರ ಮೆರವಣಿಗೆಗೆ ರಂಗುತುಂಬಿತು. ಮೆರವಣಿಗೆ ಸೂಪರ್‌ ಮಾರ್ಕೆಟ್‌ ಮೂಲಕ ಜಗತ್‌ ವೃತ್ತ ತಲುಪಿತು. ಅಲ್ಲಿ ಪಟಾಕಿ ಸಿಡಿಸಿ ಡಿ.ಜೆ. ಸದ್ದು ಮೊಳಗಿಸಿ ಸಂಭ್ರಮಿಸಲಾಯಿತು.
‘ಆಗ ಕನಕರು...ಈಗ ಸಿದ್ದರಾಮಯ್ಯ’
‘250 ದಾಸರಲ್ಲಿ ಕನಕರು ಶ್ರೇಷ್ಠ ದಾಸರು. ಅವರು ಒಂದು ಜಾತಿಗೆ ಸೀಮಿತವಲ್ಲ. 16ನೇ ಶತಮಾನದಲ್ಲೇ ಅವರು ಜಾತೀಯತೆಯ ವಿರುದ್ಧ ಸಮರ ಸಾರಿದ್ದರು. ಆದರೂ ಈತನಕ ಜಾತಿ ವ್ಯವಸ್ಥೆ ಹೋಗಿಯೇ ಇಲ್ಲ. ನಾಡಿನಲ್ಲಿ ವಿದ್ಯಾವಂತರು ಹೆಚ್ಚುತ್ತಿದ್ದರೂ ಜಾತಿ ಮಾತ್ರ ಅಳಿಯದೇ ಹೆಚ್ಚುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ವಿಷಾದಿಸಿದರು. ‘ಆಗಿನ ಕಾಲಕ್ಕೆ ಕನಕದಾಸ ಇದ್ದರು. ಅಂತೆಯೇ ಈಗಿನ ಕಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಹಾಲುಮತ ಜನಾಂಗದಲ್ಲಿ ಹುಟ್ಟಿ ಬೆಳೆದು ಬಡವರ ದಲಿತರ ಹಿಂದುಳಿದ ವರ್ಗದವರ ಕಣ್ಣೀರು ಒರೆಸುವ ಕೆಲಸವನ್ನು ಆಗ ಕನಕರು ಮಾಡಿದ್ದರು. ಈಗ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸರ್ವರಿಗೂ ಸಮಪಾಲು–ಸಮಬಾಳು ನೀತಿಗಳ ಮೇಲೆ ರಾಜ್ಯಭಾರ ನಡೆಸುತ್ತಿದ್ದಾರೆ’ ಎಂದು ಶ್ಲಾಘಿಸಿದರು. ‘ರಾಜ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಏನಾದರೂ ಮಾಡಿದರೆ ಸಿದ್ದರಾಮಯ್ಯ ಬೆಂಬಲಿಸಲು ನಾವೆಲ್ಲ ಹಿಂದುಳಿದವರು ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT