ಕಲಬುರಗಿ: 2023–24ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ವಹಿಸಿಕೊಂಡ ₹6.94 ಕೋಟಿ ಮೊತ್ತದ 155 ಕಾಮಗಾರಿಗಳಲ್ಲಿ ₹35.21 ಲಕ್ಷ ಮೊತ್ತದ 10 ಕಾಮಗಾರಿಗಳು ಪೂರ್ಣಗೊಂಡಿವೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಪ್ರತಿ ವರ್ಷವೂ ಸಕಾಲಕ್ಕೆ ಕಂತುಗಳಲ್ಲಿ ನಿಗದಿತ ಅನುದಾನದ ಮೊತ್ತ ಜಿಲ್ಲಾಡಳಿತದ ಖಾತೆಗೆ ಬಿಡುಗಡೆಯಾಗುತ್ತದೆ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ಸರ್ಕಾರಿ ಇಲಾಖೆಗಳಾದ ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಏಜೆನ್ಸಿಗಳಾದ ಕೆಆರ್ಐಡಿಎಲ್, ನಿರ್ಮಿತಿ ಕೇಂದ್ರಗಳು ವಹಿಸಿಕೊಳ್ಳುತ್ತವೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ನೀಡದ ಮಾಹಿತಿ ಅನ್ವಯ, ಆಳಂದ, ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಕಾಮಗಾರಿಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

2024ರ ಆಗಸ್ಟ್ವರೆಗೆ ಪಂಚಾಯತ್ ರಾಜ್ ವಿಭಾಗವು 155 ಕಾಮಗಾರಿಗಳ ₹6.94 ಕೋಟಿ ಮೊತ್ತದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದೆ. ಅವುಗಳಲ್ಲಿ ₹2 ಕೋಟಿ ಮೊತ್ತದ 41 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ಕೊಟ್ಟಿದ್ದರೂ ಟೆಂಡರ್ಗಾಗಿ ಎದುರು ನೋಡುತ್ತಿವೆ.

ಕೈಗೆತ್ತಿಕೊಂಡಿರುವ 13 ಕಾಮಗಾರಿಗಳಲ್ಲಿ 10 ಕಾಮಗಾರಿಗಳು ಭೌತಿಕವಾಗಿ ಮುಗಿದಿದ್ದು, 3 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ₹11.25 ಲಕ್ಷದ ಮೂರು, ಜೇವರ್ಗಿ ಕ್ಷೇತ್ರದಲ್ಲಿ ₹9 ಲಕ್ಷದ ಮೂರು ಕಾಮಗಾರಿಗಳು ಮುಕ್ತಾಯವಾಗಿವೆ. ₹3.75 ಲಕ್ಷ ಒಂದು ಕಾಮಗಾರಿ ಪ್ರಗತಿಯಲ್ಲಿದೆ. ಸೇಡಂ ಕ್ಷೇತ್ರದಲ್ಲಿ ₹7.48 ಲಕ್ಷ ಮೊತ್ತದ ಎರಡು ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ₹ 14.96 ಲಕ್ಷ ಮೊತ್ತದ ನಾಲ್ಕು ಕಾಮಗಾರಿಗಳು ಪೂರ್ಣಗೊಂಡಿವೆ ಎಂಬುದು ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ಯಾವೆಲ್ಲ ಕಾಮಗಾರಿಗಳಿಗೆ ಅನುಮೋದನೆ?: ಸಿಸಿ ರಸ್ತೆ, ಕಚ್ಚಾ ರಸ್ತೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ನವೀಕರಣ, ದೇವಸ್ಥಾನದ ಮಂಗಲ ಕಾರ್ಯಾಲಯ, ಸ್ಮಶಾನ ಭೂಮಿಗೆ ತಡೆ ಗೋಡೆ, ದೇಗುಲದ ಮಂಟಪ ನಿರ್ಮಾಣ, ಮಸೀದಿ ಅಭಿವೃದ್ಧಿ, ರಸ್ತೆ ಸುಧಾರಣೆಯಂತಹ ಕಾಮಗಾರಿಗಳಿಗೆ ಈ ಅನುದಾನವನ್ನು ಅಂದಾಜು ಮಾಡಲಾಗಿದೆ. ₹6.94 ಕೋಟಿ ಮೊತ್ತದ ಅನುದಾನದಲ್ಲಿ ಬಹುತೇಕ ಮೊತ್ತವನ್ನು ಧಾರ್ಮಿಕ ಕೇಂದ್ರಗಳು ಹಾಗೂ ಸಮುದಾಯ ಭವನಗಳಿಗಾಗಿ ಮೀಸಲಿಡಲಾಗಿದೆ.

ಚಿತ್ತಾಪುರ ಕ್ಷೇತ್ರಕ್ಕೆ ಅತ್ಯಧಿಕ

ಚಿತ್ತಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಅತ್ಯಧಿಕವಾಗಿ ₹2.03 ಕೋಟಿ ಅನುದಾನದ 44 ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅವುಗಳ ಪೈಕಿ ₹1.29 ಕೋಟಿ ಮೊತ್ತದ 29 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿಯೂ ನೀಡಲಾಗಿದೆ. ಆದರೆ ಒಂದೂ ಟೆಂಡರ್ ಕರೆದಿಲ್ಲ ಎಂಬುದು ಅಂಕಿ–ಅಂಶಗಳಿಂದ ಗೊತ್ತಾಗಿದೆ. ಅಫಜಲಪುರ ಕ್ಷೇತ್ರಕ್ಕೆ ₹3 ಲಕ್ಷ ಮೊತ್ತದ ಒಂದು ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ಕೊಡಲಾಗಿದೆ. ಚಿಂಚೋಳಿ ಕ್ಷೇತ್ರದ ಕಾಳಗಿ ತಾಲ್ಲೂಕಿನಲ್ಲಿ ₹13 ಲಕ್ಷದಲ್ಲಿ ಮೂರು ಹಾಗೂ ಚಿಂಚೋಳಿ ತಾಲ್ಲೂಕಿಗೆ ₹20 ಲಕ್ಷ ಮೊತ್ತದ ನಾಲ್ಕು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಒಂದೂ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. ಜೇವರ್ಗಿ ಕ್ಷೇತ್ರದಲ್ಲಿ ಮಾತ್ರವೇ 2024–25ನೇ ಸಾಲಿಗೆ ₹76.95 ಲಕ್ಷ ಮೊತ್ತದ 17 ಕಾಮಗಾರಿಗಳ ಪಟ್ಟಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ತಯಾರಿಸಿದೆ. ಇದುವರೆಗೂ ಯಾವುದಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಕಲಬುರಗಿ ಗ್ರಾಮೀಣಕ್ಕೆ ₹1.18 ಕೋಟಿ

ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರು ಪ್ರತಿನಿಧಿಸುವ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ₹1.18 ಕೋಟಿಯ 28 ಕಾಮಗಾರಿಗಳ ಪೈಕಿ ₹11 ಲಕ್ಷ ಮೊತ್ತದ ಮೂರು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ನೀಡಲಾಗಿದೆ. ₹11.25 ಲಕ್ಷ ಮೊತ್ತದ ಕಾಮಗಾರಿಗಳು ಮುಗಿದಿವೆ. ಜೇವರ್ಗಿ ಕ್ಷೇತ್ರದಲ್ಲಿ ₹1.78 ಕೋಟಿ ಮೊತ್ತದ 43 ಕಾಮಗಾರಿಗಳ ಪೈಕಿ 7 ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದೆ. ಸೇಡಂ ಕ್ಷೇತ್ರದಲ್ಲಿ ₹1.59 ಕೋಟಿ ಮೊತ್ತದ 32 ಕಾಮಗಾರಿಗಳಲ್ಲಿ ₹29.94 ಲಕ್ಷ ಮೊತ್ತದ ಆರು ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ಕೊಡಲಾಗಿದೆ. ₹9.98 ಲಕ್ಷದ ಎರಡು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.