ಕಲಬುರಗಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಡಿಮೆಯಾಗುತ್ತಿದ್ದ ಈರುಳ್ಳಿ ದರ ಈ ವರ್ಷ ಫೆಬ್ರುವರಿ ಆರಂಭದಲ್ಲೇ ಪಾತಾಳಕ್ಕೆ ಇಳಿಕೆಯಾಗಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕೆ.ಜಿಗೆ ₹50–₹60ಕ್ಕೆ ಮಾರಾಟವಾಗಿದ್ದ ಉಳ್ಳಾಗಡ್ಡಿ ಬೆಲೆ ಈಗ ಕೇವಲ ₹15–₹20 ಇದೆ. ಶನಿವಾರ (ಫೆ.3) ನಗರಕ್ಕೆ 27 ಸಾವಿರ ಕ್ವಿಂಟಲ್ ಆವಕವಾಗಿದ್ದು ಕ್ವಿಂಟಲ್ಗೆ ₹400–₹1500 ವರೆಗೂ ಮಾರಾಟವಾಗಿದ್ದು ರೈತರ ಬೇಬಿಗೆ ಕತ್ತರಿ ಹಾಕಿದೆ.

ದರ ಕಡಿಮೆಯಾಗಿದ್ದರೂ ನಗರದ ಪ್ರಮುಖ ವೃತ್ತ, ರಸ್ತೆ ಬದಿಯ ಚಿಲ್ಲರೆ ವ್ಯಾಪಾರಿಗಳು ಕೆ.ಜಿ ಈರುಳ್ಳಿಗೆ ₹30–₹40 ಹೇಳುತ್ತಿದ್ದಾರೆ. ಸೂಪರ್ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ, ತಾಜ್ ಸುಲ್ತಾನಪುರ ಮಾರುಕಟ್ಟೆಗಳಲ್ಲಿ ₹100ಗೆ 5 ಕೆ.ಜಿ ಉಳ್ಳಾಗಡ್ಡಿ ಮಾರಾಟ ಮಾಡಲಾಗುತ್ತಿದೆ.

‘ಕಣ್ಣಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಕಡಿಮೆ ಇದೆ, ನೀವ್ಯಾಕೆ ₹30 ಹೇಳುತ್ತಿದ್ದೀರಲ್ಲ’ ಎಂದು ‘ಪ್ರಜಾವಾಣಿ’ ಕೇಳಿದಾಗ, ‘ನಾವು ದಲ್ಲಾಳಿಯಿಂದ ತರುತ್ತೇವೆ, ಅವರು ಕೊಟ್ಟ ದರಕ್ಕೆ ನಮ್ಮ ಲಾಭ ಸೇರಿಸಿ ಮಾರಾಟ ಮಾಡುತ್ತೇವೆ. ಬೇಕಾದರೆ ₹100ಗೆ 4 ಕೆ.ಜಿ ಕೊಡುತ್ತೇನೆ ಅದಕ್ಕಿಂತ ಹೆಚ್ಚು ಆಗುವುದಿಲ್ಲ’ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಸದ್ಯ ಮಾರುಕಟ್ಟೆಗೆ ಬಂದಿರುವುದು ಹಸಿ ಈರುಳ್ಳಿ. ಇದನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಬಹಳ ದಿನಗಳಾದರೆ ಕೆಟ್ಟುಹೋಗುತ್ತದೆ, ಹೀಗಾಗಿ ಪೂರೈಕೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಸರ್ಫರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.