ಚಿಂಚೋಳಿ: ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬೇಸಾಯ ಮಾಡಿದ ಬೆನ್ನಲ್ಲಿಯೇ ರೈತರಿಗೆ ಉತ್ತಮ ಬೆಲೆ ಲಭಿಸಿದ್ದು ಸಂತಸಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಸಗಟು ಮಾರಾಟದಲ್ಲಿ ಕೆ.ಜಿಗೆ ₹10 ದರ ಇತ್ತು. ಈಗ ಬೆಲೆ ಚೇತರಿಕೆ ಕಂಡಿದ್ದು ಸಗಟು ಮಾರಾಟದಲ್ಲಿ ರೈತರಿಗೆ ದುಪಟ್ಟು ಬೆಲೆ ಲಭಿಸುತ್ತಿದೆ.

ತಾಲ್ಲೂಕಿನ ದಸ್ತಾಪುರ, ಚಿಮ್ಮಾಈದಲಾಯಿ, ಐನೋಳ್ಳಿ, ದೇಗಲಮಡಿ, ಕೊಳ್ಳೂರು, ಹಸರಗುಂಡಗಿ, ಸಾಲೇಬೀರನಹಳ್ಳಿ, ಯಂಪಳ್ಳಿ, ಪಟಪಳ್ಳಿ, ಚಿಮ್ಮನಚೋಡ ಮೊದಲಾದ ಕಡೆ ಈರುಳ್ಳಿ ಬೆಳೆದ ರೈತರು ಉತ್ತಮ ಬೆಲೆ ಪಡೆದು ಸಂತಸದಲ್ಲಿದ್ದಾರೆ.

ತಾಲ್ಲೂಕಿನ ದಸ್ತಾಪುರದ ರೈತ ಮಹಮದ್ ಶಫಿ ಮೌಜನ್ ಅವರು ತಮ್ಮ 7 ಎಕರೆ ಹೊಲದಲ್ಲಿ ಈರುಳ್ಳಿ ಬೇಸಾಯ ನಡೆಸಿದ್ದು, ಈಗಾಗಲೇ 45 ಟನ್ ಮಾರಾಟ ಮಾಡಿದ್ದಾರೆ. ಇನ್ನೂ 2.5 ಎಕರೆಯಲ್ಲಿ ಈರುಳ್ಳಿ ಬೆಳೆಯಿದ್ದು ಕೊಯ್ಲಿಗೆ ಬಂದಿದೆ.

20 ಟನ್ ಈರುಳ್ಳಿಯನ್ನು ಕ್ವಿಂಟಲ್‌ಗೆ ₹1 ಸಾವಿರದಂತೆ ಮಾರಾಟ ಮಾಡಿದ್ದರೆ ಶುಕ್ರವಾರ 16 ಟನ್ ಈರುಳ್ಳಿ ಹೊಲದಲ್ಲಿಯೇ ಕ್ವಿಂಟಲ್ ₹1,700ನಂತೆ ಮಾರಾಟ ಮಾಡಿದ್ದಾರೆ.

ಈರುಳ್ಳಿ ₹1 ಸಾವಿರ ಇದ್ದಾಗ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹200 ಲಾಭವಾಗಿದ್ದರೆ, ₹1,700ರ ಇದ್ದಾಗ ₹1 ಸಾವಿರ ಲಾಭ ಬಂದಿದೆ.

ಮಹಮದ್ ಶಫಿ ಮೌಜನ್ ಅವರ ಹೊಲದಲ್ಲಿ ಇನ್ನೂ 18ರಿಂದ 20 ಟನ್‌ಗೂ ಅಧಿಕ ಇಳುವರಿ ಬರಲಿದೆ. ಇದಕ್ಕೂ ₹1,700 ಅಥವಾ ಅದಕ್ಕಿಂತ ಹೆಚ್ಚು ದರ ಲಭಿಸಿದರೆ ರೈತನಿಗೆ ಬಂಪರ್ ಆದಾಯ ಬಂದಂತಾಗಲಿದೆ.

ಅಧಿಕ ಮಾಸದಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಸಿಗಲಿದೆ ಎಂಬುದು ರೈತರ ನಂಬಿಕೆಯಾಗಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 600 ಹೆಕ್ಟೇರ್ ಬೇಸಾಯ ಮಾಡಿದ್ದು ಶೇ 70 ಪ್ರದೇಶದಲ್ಲಿ ಕೊಯ್ಲು ಮಾಡಲಾಗಿದೆ
ರಾಜಕುಮಾರ ಗೋವಿನ್ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಚಿಂಚೋಳಿ

ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ. ತಿಂಗಳ ಹಿಂದೆ ಇದೇ ದರ ಇದ್ದರೆ ಬಂಪರ್ ಆದಾಯ ಲಭಿಸುತ್ತಿತ್ತು. ಈಗ ಶೇ 40 ರೈತರಿಗೆ ಮಾತ್ರ ಪ್ರಯೋಜನವಾಗಿದೆ
ಮಲ್ಲಿಕಾರ್ಜುನ ಭೂಶೆಟ್ಟಿ ಅಧ್ಯಕ್ಷ ಕೃಷಿಕ ಸಮಾಜ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.