ಜೇವರ್ಗಿ: ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮಾತ್ರ, ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ. ಆ ನಿಟ್ಟಿನಲ್ಲಿ ತಂದೆ–ತಾಯಿ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ತರವಾಗಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು.

ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಗುರುಕುಲ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ಬೇರೆಯವರ ಕೈಯಲ್ಲಿ ಇರುವುದಿಲ್ಲ. ತಂದೆ–ತಾಯಿ ಹಾಗೂ ಶಿಕ್ಷಕರ ಕೈಯಲ್ಲಿ ಇರುತ್ತದೆ. ಈ ಮೂರು ಜನರ ಒಳ್ಳೆಯ ಮಾರ್ಗದರ್ಶನವೇ ಮಕ್ಕಳ ಭವಿಷ್ಯ ರೂಪಿಸುತ್ತದೆ. ಆ ನಿಟ್ಟಿನಲ್ಲಿ ಮಕ್ಕಳ ಮನಸ್ಸಲ್ಲಿ ಭವಿಷ್ಯದ ಬಗ್ಗೆ ದೊಡ್ಡದಾದ ಕನಸು ಕಾಣುವಂತೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು ಬಹಳ ಪ್ರಮುಖವಾಗಿರುತ್ತದೆ ಎಂದು ಹೇಳಿದರು.

ಈಗಿನ ಕಾಲದಲ್ಲಿ ಮನುಷ್ಯ ಮನುಷ್ಯರನ್ನು ನಂಬುವುದು ಕಡಿಮೆ ಆಗುತ್ತಿದೆ. ಇದರಿಂದ ಮನುಷ್ಯತ್ವ ಎಂಬುವುದು ಕಳೆದು ಹೋಗುತ್ತಿದೆ. ಮನುಷ್ಯತ್ವ ಉಳಿಸಿಕೋಳ್ಳುವುದು ಬಹಳ ಅಗತ್ಯವಾಗಿದೆ. ಚಿಕ್ಕ ಮಕ್ಕಳ ಕೈಯಲ್ಲಿ ತಂದೆ ತಾಯಿಗಳು ಮೊಬೈಲ್ ನೀಡುವುದು ನಿಲ್ಲಿಸಬೇಕು. ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದರಿಂದ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳ ಭವಿಷ್ಯ ರೂಪಿಸುವುದರ ಜತೆಗೆ ಶಾಲೆಯಲ್ಲಿ ಶಿಕ್ಷಕರು ಸಂಸ್ಕೃತಿ ಕಲಿಸುವುದು ಬಹಳ ಮಹತ್ವದಾಗಿರುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶಿವಲಾಲಸಿಂಗ್ ಅವರು ಗುರುಕುಲ ಉತ್ಸವ-2024 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಲಯ್ಯ ಸಿ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗುರುಕುಲ ಹಾಗೂ ದಾನಮ್ಮ ಕಾಲೇಜಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅಂಕಲಗಿ ಅಭಿನವ ಗುರುಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಲಬುರಗಿ ಶ್ರೀಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ನಿತೀನ್ ಎ. ನಾಯಕ, ರಾಜಶೇಖರ ಸಾಹು ಸೀರಿ, ವಿಜಯಕುಮಾರ ಕೆ. ಹಿರೇಮಠ, ಸಿಪಿಐ ರಾಜೇಸಾಹೇಬ ನದಾಫ, ಚನಮಲ್ಲಯ್ಯ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಟಿ. ಬಿರಾದಾರ ಮಹಾಂತಯ್ಯ ಹಿರೇಮಠ, ಸಮಾಜ ಸೇವಕ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಜಗದೀಶ ಉಕನಾಳಕರ್, ಜ್ಯೋತಿ ಸಾಲಿಮಠ, ರಾಜೇಂದ್ರ ಮಠ, ಎಸ್.ಕೆ. ಬಿರಾದಾರ, ಭೀಮಾಶಂಕರ ವಿಭೂತಿ, ಚಂದ್ರಶೇಖರ ತುಂಬಗಿ, ಸದಾನಂದ ಪಾಟೀಲ, ಶ್ರೀಹರಿ ಕರಕಳ್ಳಿ, ಶಿವಶಂಕರ ಜವಳಗಿ, ಶ್ರೀಶೈಲಗೌಡ ಕರಕಳ್ಳಿ, ಶರಣಗೌಡ ಯಲಗೌಡ, ರೇವಣಸಿದ್ದ ಗಾಣಗೇರ ನೆಲೋಗಿ, ಬಸವರಾಜ ಮಾಗಣಗೇರಾ ಸೇರಿದಂತೆ ಗುರುಕುಲ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು, ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.