ಕಲಬುರಗಿ: ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ಸಂವಾದಕ್ಕೆ ನಟ ಪ್ರಕಾಶ್ ರಾಜ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಹಿಂದೂ ಜಾಗೃತ ಸೇನೆ ಕಾರ್ಯಕರ್ತರು ಭಾನುವಾರ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಹಿಂದೂ ಜಾಗೃತ ಸೇನೆ ಮುಖಂಡ ಲಕ್ಷ್ಮಿಕಾಂತ ಸ್ವಾದಿ ಸೇರಿದಂತೆ ಕೆಲವರು ಜಗತ್ ವೃತ್ತದಲ್ಲಿ ಜಮಾಯಿಸಿದರು.

ನಟ ಪ್ರಕಾಶ್ ರಾಜ್ ಅವರು ಕಲಬುರಗಿಗೆ ಬರದಂತೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಿ ಕಪ್ಪು ಬಟ್ಟೆ ಪ್ರದರ್ಶಿಸಿದರು. ಜಗತ್ ವೃತ್ತದಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.

ಪ್ರಕಾಶ್ ರಾಜ್ ಅವರು ಕೋಮು ಭಾವನೆಗೆ ಧಕ್ಕೆ ತರುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಕಲಬುರಗಿಗೆ ಬರುವುದಕ್ಕೆ ನಿರ್ಬಂಧ ಹೇರುವಂತೆ ನಿನ್ನೆ(ಶನಿವಾರ) ಮನವಿ ಸಲ್ಲಿಸಿದ್ದರು.

ಅಂತರಂಗ ಸಾಂಸ್ಕೃತಿಕ ಸೇವಾ ಸಂಸ್ಥೆ, ಸೂರ್ಯನಗರಿ ಸಾಂಸ್ಕೃತಿಕ ಕಲಾ ಸಂಘ, ರಂಗವೃಕ್ಷ ನಾಟಕ ನೃತ್ಯ ಸೇವಾ ಸಂಘ ಮತ್ತು ಕಲಬುರಗಿ ಆರ್ಟ್ ಥಿಯೇಟರ್ ವತಿಯಿಂದ ‘ಗಾಯಗಳು’ ನಾಟಕ ಪ್ರದರ್ಶನ ಮತ್ತು ನಟ ಪ್ರಕಾಶ್ ರಾವ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.