ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಅಬ್ಬರದ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕಲಬುರ್ಗಿ ನಗರದ ಅತ್ತರ ಕಾಂಪೌಂಡ್ ಬಳಿಯ ಸಿದ್ದೇಶ್ವರ ನಗರದಲ್ಲಿ ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದು ಮೂವರಿಗೆ ಗಾಯಗಳಾಗಿವೆ.

ಕುಸನೂರ ರಸ್ತೆಯ ಇರುವ ಪೂಜಾ ಕಾಲೊನಿ, ಶಹಾಬಾದ ರಸ್ತೆಯ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗಂಗಾ ನಗರ ಕಣಿ ಕೆಳ ಭಾಗದ ಮನೆಗಳಿಗೆ ನೀರು ನುಗ್ಗಿದೆ. ಪೂಜಾ ಕಾಲೊನಿಯ ಶಿಕ್ಷಕ ಭೀಮಸಿಂಗ್ ಅವರ ಮನೆಗೆ ನೀರು ಮನೆಯಲ್ಲಿನ ಸಾಮಾನುಗಳು ಹಾಳಾಗಿ ಹೋಗಿವೆ.

ಸೇಡಂ ರಸ್ತೆ, ಕೇಂದ್ರ ಬಸ್ ನಿಲ್ದಾಣವು, ಜೇವರ್ಗಿ ಕ್ರಾಸ್ ಬಳಿಯ ಕಾಂಪ್ಲೆಕ್ಸ್ ಗೆ ನೀರು ನುಗ್ಗಿದೆ.

ಕಮಲಾಪುರ ತಾಲ್ಲೂಕಿನ ಸಿರಗಾಪುರ, ಮಹಾಗಾಂವ ಗ್ರಾಮಗಳಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.