ಅಫಜಲಪುರ: ಪಟ್ಟಣದ ಅಂಬೇಡ್ಕರ ವೃತ್ತದಿಂದ ಹಳೆ ಪಟ್ಟಣ ಪಂಚಾಯಿತಿವರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಪರದಾಡುವಂತಾಗಿದೆ.

ಪಟ್ಟಣದ ಅಂಬೇಡ್ಕರ ವೃತ್ತದಿಂದ ಹಳೆ ಪಟ್ಟಣ ಪಂಚಾಯಿತಿವರೆಗೆ ರಸ್ತೆ ಅಲ್ಲಲ್ಲಿ ತಗ್ಗುಗಳು ಬಿದ್ದುಕೊಂಡಿದ್ದು, ಇನ್ನೊಂದು ಕಡೆ ಚರಂಡಿ ಸರಿಯಿಲ್ಲದ ಕಾರಣ ಮಳೆ ನೀರು ಚರಂಡಿಯಲ್ಲಿ ರಸ್ತೆ ಮೇಲೆ ಹರಿದಾಡುತ್ತದೆ. ಮಳೆ ಬಂದಾಗೊಮ್ಮೆ ರಸ್ತೆ ಮೇಲೆ ಸಂಚರಿಸುವುದೇ ಜನರಿಗೆ ದೊಡ್ಡ ತೊಂದರೆ ಆಗುತ್ತಿದೆ. ಪುರಸಭೆಯಲ್ಲಿ ಈ ರಸ್ತೆಯನ್ನು ಪ್ರತಿವರ್ಷ ದುರಸ್ತಿಗಾಗಿ ಹಣ ಖರ್ಚು ಮಾಡುತ್ತಾರೆ. ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗಿ ಹೋಗುತ್ತದೆ ಕೇವಲ ಹಣ ಎತ್ತಿ ಹಾಕಲು ಈ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ರಾಜು ಪಾಟೀಲ ಹೇಳುತ್ತಾರೆ.

ಈಗಾಗಲೇ ಈ ರಸ್ತೆಯನ್ನು 2 – 3 ಬಾರಿ ದುರಸ್ತಿ ಮಾಡಲಾಗಿದೆ. ಒಂದು ಬಾರಿ ಡಾಂಬರೀಕರಣ ಮಾಡಲಾಗಿದೆ. ಮಳೆಯಿಂದ ಎಲ್ಲವೂ ಕಿತ್ತು ಹೋಗಿದೆ. ಅಫಜಲಪುರ ಪಟ್ಟಣದಲ್ಲಿಯೇ ಇದು ಪ್ರಮುಖವಾದ ರಸ್ತೆಯಾಗಿದೆ. ಪುರಸಭೆಗೆ ಸುಮಾರು 15 ವರ್ಷಗಳಲ್ಲಿ ₹ 30 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಗುಣಮಟ್ಟದ ರಸ್ತೆಗಳಾಗಿಲ್ಲ. ಕಾಟಾಚಾರಕ್ಕೆ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 20 ವಾರ್ಡ್ಗಳಲ್ಲಿ ನಿರ್ಮಿಸಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಯಾವ ಚರಂಡಿಯಲ್ಲಿಯೂ ಹರಿಯುವ ಮಾಲಿನ್ಯ ನೀರು ಮುಂದೆ ಹೋಗುವುದಿಲ್ಲ ಅದು ಅಲ್ಲಿಯೇ ಸಂಗ್ರಹವಾಗಿ ಮಳೆ ಬಂದಾಗ ರಸ್ತೆ ಮೇಲೆ ಹರಿದಾಡುತ್ತದೆ. ಎಲ್ಲಾ ವಾರ್ಡ್ಗಳಲ್ಲಿ ಮಾಲೀನ್ಯ ಹೊಂಡಗಳು ನಿರ್ಮಾಣವಾಗಿವೆ. ಇದರ ಬಗ್ಗೆ ಪುರಸಭೆಯವರಿಗೆ ಹಲವಾರು ಬಾರಿ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ಪಟ್ಟಣದ ಯುವ ಮುಖಂಡ ಆಕಾಶ ಲೋಖಂಡೆ ಹೇಳುತ್ತಾರೆ. ಪುರಸಭೆಯವರು ಮುಖ್ಯರಸ್ತೆಯನ್ನು ದುರಸ್ತಿ ಮಾಡಿ ಸಂಚಾರ ಸುಗಮಗೊಳಿಸಬೇಕು ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.