ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಜೈಭವಾನಿ ಹೋಟೆಲ್, ಬೋರ್ಡಿಂಗ್ ಅಂಡ್ ಲಾಡ್ಜಿಂಗ್ಗೆ ಮಂಜೂರಾದ ₹ 94,14,800 ಸಬ್ಸಿಡಿ ಅನುದಾನದಲ್ಲಿ ಅಕ್ರಮ ನಡೆದಿದ್ದು, ತಮಗೆ ನ್ಯಾಯ ಕೊಡಿಸಬೇಕು ಎಂದು ಹೋಟೆಲ್ ಮಾಲೀಕ ಪ್ರೇಮ್ಕುಮಾರ ರಾಠೋಡ ಅಳಲು ತೋಡಿಕೊಂಡರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ‘ಪ್ರೇಮ್ಕುಮಾರ ಕಟ್ಟಡ ನಿರ್ಮಾಣಕ್ಕೋಸ್ಕರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿದ್ದು, ಗುಂಡಯ್ಯ ಗುತ್ತೇದಾರ ಎಂಬುವವರು ಭಾಗಿದಾರರಾಗಿದ್ದಾರೆ. ಆದರೆ ಹೋಟೆಲ್ಗೆ ದೊರೆತಿದ್ದ ₹ 94,14,800 ಸಬ್ಸಿಡಿಯನ್ನು ಅವರು ನಕಲಿ ಖಾತೆ ತೆರೆದು ಲಪಟಾಯಿಸಿದ್ದಾರೆ. ಇದರಿಂದ ಪ್ರೇಮ್ಕುಮಾರ್ ಅವರಿಗೆ ಅನ್ಯಾಯವಾಗಿದ್ದು, ಸರ್ಕಾರ, ಜಿಲ್ಲಾಧಿಕಾರಿ ಈ ಕುರಿತು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಅಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಸೂಕ್ತ ತನಿಖೆ ನಡೆದು ಸಂತ್ರಸ್ತರಿಗೆ ನ್ಯಾಯ ದೊರಕಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶಂಕರ್ ಚವ್ಹಾಣ, ಬಾಬು ಪವಾರ, ಧಾರಾಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.