ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಹಾವಳಿ ಹೆಚ್ಚಾಗಿದೆ. ಸಾಲ ಮಾಡಿ ಬಿತ್ತನೆ ಬೀಜ ತೆಗೆದುಕೊಂಡು ಹೋಗಿ ಹಾಕಿದ ರೈತರು ಮೊಳಕೆ ಬಾರದೆ ಪರದಾಡುತ್ತಿದ್ದಾರೆ. ಅಧಿಕಾರಿಗಳು ಅಂಥ ಮಳಿಗೆಗಳ ಪರವಾನಗಿ ರದ್ದು ಮಾಡಬೇಕು
ನಾಗೇಂದ್ರಪ್ಪ ಥಂಬೆ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
‘ರೈತರು ಎಚ್ಚರಿಕೆ ವಹಿಸಿ’
ಕೃಷಿ ಪರಿಕರ ಖರೀದಿ ವೇಳೆ ರೈತರು ಎಚ್ಚರಿಕೆ ವಹಿಸಬೇಕು. ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಇಲಾಖೆಯ ಪರವಾನಗಿ ಪತ್ರ ಹೊಂದಿದವರಿಂದ ಮಾತ್ರ ಖರೀದಿ ಮಾಡಬೇಕು. ಕಡ್ಡಾಯವಾಗಿ ರಶೀದಿ ಪಡೆಯಬೇಕು. ಬಿತ್ತನೆ ಬೀಜದ ಪ್ಯಾಕೆಟ್ ಪರಿಶೀಲಿಸಬೇಕು. ಪರವಾನಗಿ ಹೊಂದಿಲ್ಲದೆ ಕೃಷಿ ಪರಿಕರ ಮಾರಾಟ ಮಾಡುವುದು ಕಂಡುಬಂದರೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮನವಿ ಮಾಡಿದ್ದಾರೆ.
ಯಾವ್ಯಾವ ನಿಯಮ ಉಲ್ಲಂಘನೆ?
ಬೀಜ ಅಧಿನಿಯಮ–1966 ರಸಗೊಬ್ಬರ ನಿಯಂತ್ರಣ ಆದೇಶ–1985 ಬೀಜಗಳ ನಿಯಂತ್ರಣ ಆದೇಶ–1983 ಹಾಗೂ ಕೀಟನಾಶಕಗಳ ನಿಯಮ–1971 ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಈ ನಿಯಮಗಳಡಿ ಗಂಭೀರ ಪ್ರಕರಣಗಳಲ್ಲಿ ಮಳಿಗೆಗಳ ಪರವಾನಗಿ ಅಮಾನತು ಮಾಡಲಾಗಿದೆ.