ಸರ್ಕಾರದ ಅಚ್ಚರಿಯ ಆಯ್ಕೆ
ರಂಗಾಯಣ ನಿರ್ದೇಶಕರನ್ನಾಗಿ ತಮ್ಮನ್ನು ನೇಮಕ ಮಾಡುವ ಕುರಿತು ಸ್ವತಃ ಸುಜಾತಾ ಜಂಗಮಶೆಟ್ಟಿ ಅವರಿಗೇ ಅಚ್ಚರಿ ಮೂಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಲೇಖಕ ರಾಜಪ್ಪ ದಳವಾಯಿ ಸೇರಿದಂತೆ ರಂಗ ಸಮಾಜದ ಸದಸ್ಯರು ಭಾಗವಹಿಸಿದ್ದ ಸಮಿತಿಯು ಕಲಬುರಗಿ ರಂಗಾಯಣಕ್ಕೆ ಹಿರಿಯ ರಂಗಕರ್ಮಿಗಳಾದ ಶಂಕ್ರಯ್ಯ ಘಂಟಿ, ಮಹಿಪಾಲರೆಡ್ಡಿ ಮುನ್ನೂರ್, ಯುವ ಕಲಾವಿದ ಸಂದೀಪ್ ಅವರ ಹೆಸರುಗಳನ್ನು ಅಂತಿಮಗೊಳಿಸಿತ್ತು. ಮೂವರ ಹೆಸರನ್ನೂ ಕೈಬಿಟ್ಟ ಸರ್ಕಾರ ಸುಜಾತಾ ಅವರನ್ನು ಪರಿಗಣಿಸಿದೆ.