ಕಮಲಾಪುರ (ಕಲಬುರಗಿ ಜಿಲ್ಲೆ): ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆಹೋಗಿದ್ದ ತಾಲ್ಲೂಕಿನ ಮಹಾಗಾಂವ ಕಳ್ಳಿಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ (58), ನದಿಯಲ್ಲಿ ಈಜಾಡುತ್ತಿರುವಾಗಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಶಹಾಬಾದ್ ತಾಲ್ಲೂಕಿನ ಹೊನಗುಂಟಾದ ಚಂದ್ರಲಾಂಬಿಕಾ ದೇವಸ್ಥಾನದ ಬಳಿ ಕಾಗಿಣಾ ಹಾಗೂ ಭೀಮಾ ನದಿಗಳ ಸಂಗಮಸ್ಥಾನವಿದೆ. ಪ್ರತಿ ವರ್ಷ ಇಲ್ಲಿಯೇ ಸ್ನಾನ ಮಾಡುವುದು ಸ್ವಾಮೀಜಿ ಅವರ ರೂಢಿ. ಈ ಬಾರಿ ಕೂಡ ಶುಕ್ರವಾರ ತೆರಳಿದ್ದರು.

‘ಮಧ್ಯಾಹ್ನ 1ರ ಸುಮಾರಿಗೆ ಭಕ್ತರಾದ ಜಗದೀಶ ಬಿರಾದಾರ,ಶರಣಪ್ಪ ಬಾಳಿ ಹಾಗೂ ಇತರರ ಜೊತೆಗೂಡಿ ಸ್ವಾಮೀಜಿ ಈಜಾಡುತ್ತಿದ್ದರು. ಭಕ್ತರು ಈಜುತ್ತ ದಡ ಸೇರಿದರು. ತಿರುಗಿನೋಡುವಷ್ಟರಲ್ಲಿ ಸ್ವಾಮೀಜಿ ನೀರಿನಲ್ಲಿ ಮುಳುಗುತ್ತಿರುವುದು ಕಂಡುಬಂತು. ಸುತ್ತ ಇದ್ದವರು ಅವರನ್ನು ದಡಕ್ಕೆ ಕರೆತಂದರು. ಅಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದ್ದರು. ನೀರು ಕುಡಿದಿರಬಹುದು ಎಂದು ಹೊಟ್ಟೆಭಾಗ ಒತ್ತಿದೆವು. ಆದರೂ ಸ್ವಾಮೀಜಿ ಅವರಿಗೆ ಪ್ರಜ್ಞೆ ಬರಲಿಲ್ಲ. ತಕ್ಷಣ ಶಹಾಬಾದ್ನ ಡಾ.ವೀರಭದ್ರಪ್ಪ ಇಂಗಿನಶೆಟ್ಟಿ ಆಸ್ಪತ್ರೆಗೆ ಸಾಗಿಸಲಾಯಿತು. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು’ ಎಂದು ಭಕ್ತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪಾರ್ಥಿವ ಶರೀರವನ್ನು ಮಹಾಗಾಂವ ಮಠಕ್ಕೆ ತಂದು ಭಕ್ತರ ದರ್ಶನಕ್ಕೆ ಇಡಲಾಗಿದ್ದು, ಇದೇ15ರಂದು (ಶನಿವಾರ) ಮಧ್ಯಾಹ್ನ 3ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.1980ರಲ್ಲಿ ಪೀಠ ಅಲಂಕರಿಸಿದ್ದ ಸ್ವಾಮೀಜಿ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಕೂಡ ತೆರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.