ಕಲಬುರಗಿ: ‘ಪ್ರಸಕ್ತ ಸಾಲಿನಲ್ಲಿ ತೊಗರಿಕಾಳು ಖರೀದಿಸಲು ಜಿಲ್ಲೆಯಲ್ಲಿ 184 ಖರೀದಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಡಿ.15ರಿಂದ ಎಲ್ಲ ಕೇಂದ್ರಗಳು ಖರೀದಿ ಆರಂಭಿಸಲಿವೆ. ಪರಿಷ್ಕೃತ ಆದೇಶದ ಪ್ರಕಾರ, ಪ್ರತಿ ಕ್ವಿಂಟಲ್‌ಗೆ ₹ 6300 ಬೆಂಬಲ ಬೆಲೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಇದಕ್ಕೆ ಡಿ. 15ರಿಂದಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಕೂಡ ಆರಂಭವಾಗಲಿದೆ. ನೋಂದಣಿಗೆ 45 ದಿನ ಹಾಗೂ ಖರೀದಿಗೆ 90 ದಿನ ಅವಕಾಶ ಇರುತ್ತದೆ. ಪ್ರತಿ ಎಕರೆಗೆ 7.5 ಎಕರೆಯಂತೆ ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಲ್ ತೊಗರಿಕಾಳು ಖರೀದಿಸಲಾಗುವುದು. ಈ ಖರೀದಿ ಕೇಂದ್ರಗಳು ಎಲ್ಲ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಇವೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ತೊಗರಿ ನೀಡಬೇಕು.

ನೋಂದಣಿಗಾಗಿ ಎನ್.ಐ.ಸಿ ಸಂಸ್ಥೆಯು ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವನ್ನು ಈಗಾಗಲೇ ‘ಫ್ರುಟ್ಸ್’ ದತ್ತಾಂಶದಲ್ಲಿ ಸೇರಿಸಿ, ಬೆಳೆ ಸಮೀಕ್ಷೆಯ ತಾಳೆ ಮಾಡಿ ವಿವರಗಳನ್ನು ಸೇರಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ ಎನ್.ಐ.ಸಿ ತಂತ್ರಾಂಶದಿಂದ ‘ನಾಫೆಡ್’ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ತಂತ್ರಾಂಶದಲ್ಲಿ ಈ ಮಾಹಿತಿ ಬಳಸಿ ರೈತರಿಂದ ತೊಗರಿಕಾಳು ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.