ಪ್ರಜಾವಾಣಿ ವಾರ್ತೆ

ಕುಶಾಲನಗರ: ಸಮೀಪದ ಕೂಡಿಗೆಯಲ್ಲಿ ಬಸವೇಶ್ವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ನಂತರ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಭವ್ಯವಾದ ಮಂಟಪದಲ್ಲಿ ಬಸವೇಶ್ವರ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮಂಗಳವಾದ್ಯ, ಕೇರಳದ ಚಂಡ್ಯೆ ವಾದ್ಯ ಮೆರವಣಿಗೆಗೆ ಮೆರುಗು ನೀಡಿದವು. ಗ್ರಾಮವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಕೂಡಿಗೆ ಸರ್ಕಲ್ ಮೂಲಕ ಕೂಡಿಗೆ ಕೊಪ್ಪಲ್, ಹೆಗ್ಗಡಹಳ್ಳಿ ಕೋಟೆ ಮಾರ್ಗವಾಗಿ ತೆರಳಿದ ಮೆರವಣಿಗೆ ನಂತರ ದೇವಾಲಯದ ಬಳಿ ಮುಕ್ತಾಯವಾಯಿತು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ, ಟಿ, ಗಿರೀಶ್, ಕಾರ್ಯದರ್ಶಿ ಗುರುಪಾದಸ್ವಾಮಿ ಅರಾಧ್ಯ, ಉಪಾಧ್ಯಕ್ಷ ಕೆ.ಟಿ. ಪ್ರಕಾಶ್, ಸಹಕಾರ್ಯದರ್ಶಿ ಕೆ.ಜೆ. ರಾಜಶೇಖರ, ಮಾಜಿ ಅಧ್ಯಕ್ಷರು, ಸಮಿತಿಯ ನಿರ್ದೇಶಕರು ಗ್ರಾಮಸ್ಥರು, ನೂರಾರು ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.