ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಚರ್ಚ್‌ನ ವಾರ್ಷಿಕೋತ್ಸವ ಭಾನುವಾರ ನಡೆಯಿತು.

ಉತ್ಸವದ ಅಂಗವಾಗಿ ಭಾನುವಾರ ಚರ್ಚ್‌ನ ಪ್ರಧಾನ ಧರ್ಮ ಗುರು ದಯಾನಂದ ಪ್ರಭು ಅವರ ನೇತೃತ್ವದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು. ಧರ್ಮಗುರು ಅಲ್ವಿನ್ ಡಿಸೋಜ ಅವರು ಪ್ರಬೋಧನೆ ನಡೆಸಿಕೊಟ್ಟರು.

ಸಂಜೆ 7ಕ್ಕೆ ವಿದ್ಯುತ್ ದೀಪಾಲಂಕೃತ ಮಂಟಪದೊಂದಿಗೆ ಸಮುದಾಯ ಬಾಂಧವರು ಮೇಣದ ಬತ್ತಿ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭ ದಯಾನಂದ ಪ್ರಭು ಅವರು ಬರೆದು ಪ್ರಕಟಿಸಿರುವ ‘ಅಮರ ಬಲಿದಾನ’ ಎಂಬ ಪುಸ್ತಕವನ್ನು ಧರ್ಮಗುರು ಆಲ್ವಿನ್ ಬಿಡುಗಡೆಗೊಳಿಸಿದರು.

ಉತ್ಸವದಲ್ಲಿ ಸಂತ ಅನ್ನಮ್ಮ ಚರ್ಚ್ ಸಹಾಯಕ ಧರ್ಮಗುರು ಚಾರ್ಲ್ಸ್, ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಐಸಾಕ್ ರತ್ನಾಕರ್, ಧರ್ಮಗುರು ಮದಲೈ ಮುತ್ತು ಸೇರಿದಂತೆ ವಿವಿಧೆಡೆಗಳಿಂದ ಚರ್ಚ್ ಧರ್ಮಗುರುಗಳು ಭಾಗವಹಿಸಿದ್ದರು.

ಎರಡು ಶತಮಾನಗಳ ಇತಿಹಾಸ ಹೊಂದಿರುವ ಹಾಗೂ ಜಿಲ್ಲೆಯ ಪ್ರಥಮ ಚರ್ಚ್ ಆಗಿರುವ ಸಂತ ಅನ್ನಮ್ಮ ಚರ್ಚ್ ಉತ್ಸವಕ್ಕೆ ಫೆ.8ರಂದು ಧ್ವಜಾರೋಹಣ, ಜಪಸರ ಹಾಗೂ ದಿವ್ಯ ಬಲಿಪೂಜೆಯೊಂದಿಗೆ ಚಾಲನೆ ನೀಡಲಾಗಿತ್ತು. ಫೆ.9 ಹಾಗೂ 10ರಂದು ಉತ್ಸವದ ಅಂಗವಾಗಿ ಸಂಜೆ 5:30ಕ್ಕೆ ಜಪಸರ ಹಾಗೂ ದಿವ್ಯಬಲಿ ಪೂಜೆ ನಡೆದಿತ್ತು. ಈ ಮೂರು ದಿನಗಳ ಪೂಜೆ ಹಾಗೂ ಪ್ರಬೋಧನೆಯನ್ನು ಧರ್ಮಗುರು ಆಲ್ವಿನ್ ಡಿಸೋಜಾ ಮತ್ತು ಸಿರಿಲ್ ಆನಂದ್ ನೇರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.