ಮಡಿಕೇರಿ: ಬಿ.ಎಲ್.ರೈಸ್ ಅವರ ನಂತರ ಕೊಡಗಿನಲ್ಲಿ ನಡೆದ ಅತಿ ದೊಡ್ಡ ಶಾಸನಗಳ ಶೋಧ ಎಂದೇ ಪರಿಗಣಿತವಾದ ಇಲ್ಲಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಬಿ.ಪಿ.ರೇಖಾ ಅವರು 2023ರಲ್ಲಿ ನಡೆಸಿದ ಗ್ರಾಮಾವಾರು ಸರ್ವೆಯಲ್ಲಿ ಪತ್ತೆಯಾದ ಶಾಸನಗಳ ಓದು ಪೂರ್ಣಗೊಂಡಿದೆ.

ಬಿ.ಎಲ್.ರೈಸ್ ಅವರು 1886ರಲ್ಲಿ ಪ್ರಕಟಿಸಿದ ತಮ್ಮ ಮೊದಲ ‘ಎಪಿಗ್ರಾಫಿಯ ಕರ್ನಾಟಿಕ’ದಲ್ಲಿ ಕೊಡಗು ಜಿಲ್ಲೆಯ 114 ಶಾಸನಗಳನ್ನು ಶೋಧಿಸಿ ಪ್ರಕಟಿಸಿದ್ದರು. ಈಗ ಬಿ.ಪಿ.ರೇಖಾ ಅವರಿಗೆ 69 ಹೊಸ ಶಾಸನಗಳು ಸಿಕ್ಕಿವೆ. ಮೈಸೂರಿನ ಶಾಸನ ತಜ್ಞರಾದ ಎಚ್.ಎಂ.ನಾಗರಾಜರಾವ್ ಅವರು ಈ ಶಾಸನಗಳನ್ನು ಓದಿ ಅದರ ಪಠ್ಯವನ್ನು ಸಿದ್ಧಪಡಿಸಿದ್ದು, ಹಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ.

ಕ್ರಿ.ಶ. 8ನೇ ಶತಮಾನದಷ್ಟು ಹಳೆಯ ಶಾಸನಗಳು ಇವುಗಳಲ್ಲಿ ಸೇರಿರುವುದು ವಿಶೇಷ. ನಿಲುವಾಗಿಲು ಗ್ರಾಮದಲ್ಲಿ 9ನೇ ಶತಮಾನಕ್ಕೆ ಸೇರಿದ ಶಾಸನವೊಂದರಲ್ಲಿ ವಾಸಂತಿ ದೇಗುಲದ ಪ್ರಸ್ತಾಪ ಇದೆ. ವಿಶೇಷ ಎಂದರೆ, ಇಲ್ಲಿ ಈ ಹೆಸರಿನ ಯಾವುದೇ ದೇಗುಲಗಳೂ ಇಲ್ಲ. ಇಂತಹ ಅನೇಕ ವಿಶೇಷ ಸಂಗತಿಗಳು ದೊರೆತಿರುವ ಶಾಸನಗಳಲ್ಲಿ ಅಡಕವಾಗಿವೆ.

ಎಡವಾರೆ ಗ್ರಾಮದಲ್ಲಿ ನಿಷಿಧಿ ಶಾಸನವೊಂದು ದೊರೆತಿದ್ದು, ಇದು 9ನೇ ಶತಮಾನಕ್ಕೆ ಸೇರಿದ್ದಾಗಿದೆ. ‘ಕಲಿಯುಗ ಬ್ರಹ್ಮ’ ಎಂಬ ಹೆಸರು ಪಡೆದಿದ್ದ ವೇಂಣ್ಡಿ ಎಂಬುವವರು ಸ್ವರ್ಗವೇರಿದ ಮಾಹಿತಿ ಇದರಲ್ಲಿದೆ. ವಿರಾಜಪೇಟೆಯ ಕಳತ್ಮಾಡು ಎಂಬಲ್ಲಿ ಕನಕಸೇನಯ್ಯ ಎಂಬಾತ ತನ್ನ ಗುರು ಮರಣ ಹೊಂದಿದಾಗ ಹಾಕಿಸಿದ ನಿಷಿಧಿ ಶಾಸನ ಸಿಕ್ಕಿದೆ. ಇದೇ ಬಗೆಯಲ್ಲಿ ಜೈನಧರ್ಮಕ್ಕೆ ಸೇರಿದ ಅನೇಕ ಶಾಸನಗಳೂ ಲಭ್ಯವಾಗಿವೆ.

ಶಿರಂಗಾಲದಲ್ಲಿ ದೊರೆತ 11-12ನೇ ಶತಮಾನಕ್ಕೆ ಸೇರಿದ ಶಾಸನವೊಂದರಲ್ಲಿ ‘ಸಿರವಂಗಲ’ ಎಂಬ ಹೆಸರು ಇದೆ. ಇದು ಶಿರಂಗಾಲಕ್ಕೆ ಹಿಂದೆ ಇದ್ದ ಹೆಸರಿನ ಸೂಚಕವಾಗಿದೆ. ಜೊತೆಗೆ, ಇದರಲ್ಲಿ ಕಾವೇರಿ ನದಿಯ ಬಗ್ಗೆ ಉಲ್ಲೇಖವೂ ಇದ್ದು, ಸಿರಿಯಮ್ಮ, ಕಾವಗೌಡ ಎಂಬುವವರ ಹೆಸರುಗಳು ಪ್ರಸ್ತಾವವಾಗಿವೆ. ಇಂತಹ ಅನೇಕ ಕುತೂಹಲಕರ ಅಂಶಗಳು ಪತ್ತೆಯಾಗಿರುವ ಶಾಸನಗಳಲ್ಲಿದೆ.

ಸೀಗೆಹೊಸೂರಿನಲ್ಲಿ ರಾಜೇಂದ್ರ ಚೋಳನಿಗೆ ಸಂಬಂಧಿಸಿದ ಶಾಸನ ಸಿಕ್ಕಿದೆ. ಇದು ರಾಜೇಂದ್ರ ಚೋಳನ ಆಳ್ವಿಕೆ ಕೊಡಗಿನವರೆಗೂ ವ್ಯಾಪಿಸಿತ್ತು ಎಂಬುದಕ್ಕೆ ಆಧಾರವಾಗಿದೆ.

ಮೃತ್ಯುಂಜಯ ದೇವಾಲಯದಲ್ಲಿ ಸಿಕ್ಕಿದ ಶಾಸನದಲ್ಲಿ ‘ವಂಗಲ’ ಎಂಬ ಸ್ಥಳನಾಮದ ಉಲ್ಲೇಖವಿದೆ. ಬೇಳೂರು ಬಸವನಹಳ್ಳಿಯಲ್ಲಿ ದೊರೆತ ಶಾಸನದಲ್ಲಿ ಕೊಂಗಾಳ್ವರ ‘ಬಡಿವ’ ಎಂಬಾತನ ಉಲ್ಲೇಖ ಇದೆ. ಕೊಂಗಾಳ್ವರಿಗೆ ಸಂಬಂಧಿಸಿದಂತೆ ಸಿಕ್ಕಿರುವ ವಿರಳಾತಿ ವಿರಳ ಶಾಸನಗಳಲ್ಲಿ ಇದು ಒಂದೆಂಬುದು ವಿಶೇಷ.

ಹೀಗೆ, ಹಲವು ಹೊಸ ಸಂಗತಿಗಳಿರುವ ಶಾಸನಗಳು ಪತ್ತೆಯಾಗಿರುವುದು ಬಿ.ಎಲ್.ರೈಸ್ ಅವರ ನಂತರ ನಡೆದ ಅತಿ ದೊಡ್ಡ ಶಾಸನಗಳ ಶೋಧ ರೇಖಾ ಅವರದ್ದು ಎನ್ನುವುದಕ್ಕೆ ಪುಷ್ಟಿ ನೀಡಿದೆ. ಹೊಸದಾಗಿ ಪತ್ತೆಯಾಗಿರುವ ಶಾಸನಗಳು ಹಾಗೂ ಪುರಾತತ್ವದ ಆಧಾರಗಳನ್ನು ಆಧಾರವಾಗಿಟ್ಟುಕೊಂಡು ಇತಿಹಾಸವನ್ನು ಮರಳಿ ರಚಿಸಬೇಕಿದೆ.

ಬಿ.ಎಲ್.ರೈಸ್ ಅವರಿಗೆ ಸಿಕ್ಕಿದ್ದು 114 ಶಾಸನಗಳು ಬಿ.ಪಿ.ರೇಖಾ ಅವರಿಗೆ ಸಿಕ್ಕಿದ್ದು 69 ಶಾಸನಗಳು ಹಲವು ಹೊಸ ಸಂಗತಿಗಳನ್ನು ಹೇಳುತ್ತಿವೆ ಈ ಶಾಸನಗಳು

ಕೊಡಗಿನಲ್ಲಿ ಹೊಸದಾಗಿ ಪತ್ತೆಯಾದ 69 ಶಾಸನಗಳ ಪಠ್ಯ ಸಿದ್ಧಗೊಂಡಿದೆ. ಅದನ್ನು ಅಧ್ಯಯನ ನಡೆಸಿದರೆ ಇನ್ನಷ್ಟು ಇತಿಹಾಸದ ಹೊಸ ಸಂಗತಿಗಳು ತಿಳಿಯಲಿವೆ
. ಬಿ.ಪಿ.ರೇಖಾ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.