ಮಡಿಕೇರಿ: ‘ಈಸ್ಟರ್ನ್ ಧನಿಯಾ ಪುಡಿಯ 250 ಗ್ರಾಂ ತೂಕದ ‘ಕೆ24D08A’ ಬ್ಯಾಚ್ ಸಂಖ್ಯೆಯಲ್ಲಿರುವ ಧನಿಯಾ ಪುಡಿಯು ಅಸುರಕ್ಷಿತವಾಗಿದ್ದು, ಅದನ್ನು ಸಾರ್ವಜನಿಕರು ಬಳಸಬಾರದು’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಎಚ್ಚರಿಕೆ ನೀಡಿದ್ದಾರೆ.

‘ಈ ಪ್ಯಾಕೆಟ್‌ನ ಮೇಲೆ 2024ರ ಏಪ್ರಿಲ್ 8ರಂದು ತಯಾರಾಗಿರುವ ಹಾಗೂ 2025ರ ಏಪ್ರಿಲ್ 7ರಂದು ಅದರ ಅವಧಿ ಮುಗಿಯುವ ದಿನಾಂಕ ಇದೆ. ಈ ಬ್ಯಾಚ್ ಸಂಖ್ಯೆಯ ಪ್ಯಾಕೆಟ್‌ನಲ್ಲಿರುವ ಪುಡಿಗಳನ್ನು ಇಲಾಖೆಯ ಸರ್ವೇಕ್ಷಣಾ ಆಂದೋಲನದ ನಿಮಿತ್ತ ವಿರಾಜಪೇಟೆ ವ್ಯಾಪ್ತಿಯಲ್ಲಿ ಸಂಗ್ರಹಿಸಿ ಎನ್ಎಬಿಎಲ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಅದು ಅಸುರಕ್ಷಿತ ಎಂಬ ವರದಿ ಬಂದಿದೆ. ಸಾರ್ವಜನಿಕರು ಈ ಬ್ಯಾಚ್ ಸಂಖ್ಯೆಯ ಪ್ಯಾಕೆಟ್‌ಗಳನ್ನು ಖರೀದಿಸಬಾರದು, ಖರೀದಿಸಿದ್ದರೆ ಅಂಗಡಿಗಳಿಗೆ ವಾಪಸ್ ನೀಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.