ಸೋಮವಾರಪೇಟೆ: ತಾಲ್ಲೂಕಿನ ಕಾರೆಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿಯಿಂದ ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಲ್ತಾರೆಶೆಟ್ಟಳ್ಳಿಯ ಬಿ.ಸಿ.ಪ್ರಮೋದ್ ಮತ್ತು ಅವರ ಸ್ನೇಹಿತ ಕೌಶಿಕ್ ಅವರು ಮೈಸೂರಿನಿಂದ ಹಿಂದಿರುಗಿ, ಯಡವನಾಡು ಮೀಸಲು ಅರಣ್ಯದ ಸನಿಹದಲ್ಲಿರುವ ಕಾರೇಕೊಪ್ಪ ಗ್ರಾಮದ ರಸ್ತೆಗೆ ರಾತ್ರಿ 10.30ಕ್ಕೆ ಬರುತ್ತಿದ್ದಂತೆ ಒಂಟಿ ಸಲಗ ಎದುರಿಗೆ ಬಂದು ಕಾರಿನ ಮೇಲೆ ದಾಳಿ ನಡೆಸಿತು. ಕಾರಿನಲ್ಲಿದ್ದವರು ಜೀವಭಯದಿಂದ ಹೊರಬಂದು ತಪ್ಪಿಸಿಕೊಂಡಿದ್ದಾರೆ.

ಒಬ್ಬರು ಕಾಫಿ ತೋಟದೊಳಗೆ ಓಡಿದ್ದಾರೆ. ಸೋಲಾರ್ ತಂತಿ ಬೇಲಿಯಿದ್ದ ಕಾರಣ ಕಾಡಾನೆ ಅಟ್ಟಿಸಿಕೊಂಡು ಹೋಗಿಲ್ಲ. ಮತ್ತೊಬ್ಬರು ಮನೆಯೊಂದರ ಗೇಟ್ ದಾಟಿ ತಪ್ಪಿಸಿಕೊಂಡಿದ್ದಾರೆ.

ನಂತರ ಕಾಡಾನೆ 10 ಮೀಟರ್ ದೂರಕ್ಕೆ ಕಾರನ್ನು ತಳ್ಳಿದ್ದು, ಹಿಂದಿನ ಗಾಜಿಗೆ ಹಾನಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಹಾನಿಗೊಳಗಾದ ಕಾರಿನ ದುರಸ್ತಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ತಡವಾಗಿ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಕಾಡಾನೆ ಹಾವಳಿ ನಿಯಂತ್ರಣದ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತಿದ್ದರೂ, ಕಾಡಾನೆಗಳ ಹಾವಳಿ ಕಡಿಮೆಯಾಗಿಲ್ಲ. ಯೋಜನೆಗೆ ಬಿಡುಗಡೆಯಾದ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ಕಾಫಿ ಬೆಳೆಗಾರ ಹಾನಗಲ್ ಮಿಥುನ್ ಪ್ರಶ್ನಿಸಿದರು.

‘ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆಯಾಗುತ್ತಿದೆ’ ಎಂದು ಪ್ರಮುಖರಾದ ಸುರೇಶ್ ಶೆಟ್ಟಿ, ಬಗ್ಗನ ಹರೀಶ್, ಪ್ರಮೋದ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಎಸಿಎಫ್ ಗೋಪಾಲ್, ಆರ್ಎಫ್ಒ ಶೈಲೇಂದ್ರ, ಫಾರೆಸ್ಟರ್ ನಾರಾಯಣ ಮೂಲ್ಯ ಜನರನ್ನು ಸಮಧಾನಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.