ಮಡಿಕೇರಿ: ಸುಂದರ ಪ್ರಕೃತಿಯ ಮಡಿಲು ಕೊಡಗಿನ ಪರಿಸರದಲ್ಲಿ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ ಅಭಿನಯದ ‘ಆನಂದ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಪಿ.ವಾಸು ನಿರ್ದೇಶನದಲ್ಲಿ, ಯೋಗಿ ದ್ವಾರಕೀಶ್ ನಿರ್ಮಾಪಕರಾಗಿರುವ ಚಿತ್ರದ ಹಾಡು ಹಾಗೂ ಸಾಹಸ ದೃಶ್ಯಗಳನ್ನು ಮದೆನಾಡಿನ ಕಲ್ಲುಕ್ವಾರಿ ಹಾಗೂ ಕೊಯನಾಡಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿದೆ.

ರಚಿತಾ ರಾಮ್ ನಾಯಕಿ ಆಗಿರುವ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ ನಿರ್ದೇಶನವಿದ್ದು, ಸಾಧು ಕೋಕಿಲ, ರಂಗಾಯಣ ರಗು, ಸುಹಾಸಿನಿ, ಅನಂತ್ ನಾಗ್ ಸೇರಿದಂತೆ 35ಕ್ಕೂ ಅಧಿಕ ಕಲಾವಿದರು ನಟಿಸುತ್ತಿದ್ದಾರೆ.

ಈಗಾಗಲೇ ರಾಜ್ಯದ ವಿವಿಧೆಡೆ 67 ದಿನ ಚಿತ್ರದ ಚಿತ್ರೀಕರಣ ಮುಗಿದಿದ್ದು, ಕೊಡಗಿನಲ್ಲಿ 6 ದಿನ ಚಿತ್ರೀಕರಣ ನಡೆಯಲಿದೆ. ಬಳಿಕ ಹೈದರಾಬಾದ್ರಾ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.